Wednesday, January 15, 2014

                 ಹೊಸ ಕಥೆ ಬರೆಯಲು ಆರಂಭಿಸುತ್ತಿದ್ದೇನೆ, 
...
ಇದರಲ್ಲಿ ಯಾವುದೇ ವ್ಯಕ್ತಿಯ ಅನುಕರಣೆ ಆಗಲಿ, ಲೈಂಗಿಕ ಅಭಿವ್ಯಕ್ತಿ ಆಗಲಿ, ದುರುದ್ದೇಶವಾಗಲಿ ಇಲ್ಲ. ಮಾನವನ ಸಹಜ ಪ್ರವೃತ್ತಿಯಂತೆ ಕಾಲ್ಪನಿಕ ಕಥೆಯಷ್ಟೇ.
--------------------------------------------------------------------------------------------------------------------------
ಇದು ಇಂದಿನಂತೆ ಅಧುನಿಕ ಕಾಲದ ಕೈಯಲ್ಲೇ ಜಗತ್ತನ್ನು ನೋಡುವ ಮೊಬೈಲ್, ಕಂಪ್ಯೂಟರ್ ಕಾಲದ ಕಥೆಯಲ್ಲ. ಸುಮಾರು  ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದಿನ ಕಥೆ.
ಸುಂದರ ಹಳ್ಳಿ ಹಳ್ಳಿಯ ಅರ್ಧ ದಾರಿಯವರೆಗೂ ಟಾರ್ ರಸ್ತೆ ಅಲ್ಲಿಂದಾಚೆಗೆ ಸೈಕಲ್ ಸಹ ಹೋಗದಂತಹ ಮಣ್ಣು ತುಂಬಿದ ರಸ್ತೆಯಲ್ಲಿ  "ಶಿವು " ತನ್ನ ಬುಲ್ಲೆಟ್ ಬೈಕ್ ನಲ್ಲಿ ಗುಡ್ ಗುಡ್ ಅಂತ ಬಂದ್ರೆ ಎಲ್ಲರು ನಿಂತಲ್ಲಿಯೇ ನಿಂತು ಬಿದುತ್ತಿದ್ದರು. ಅಷ್ಟಿತ್ತು ಅದರ ಮತ್ತು ಅವನ ಆರ್ಭಟ. ನೋಡಲು ದಷ್ಟಪುಷ್ಟವಾಗಿ ನಿಂತಿದ್ದ ಹನುಮಂತನ ದೇಹ ಅವನದ್ದು. ಆಗಾಗ ಗರಡಿಯಲ್ಲಿ ಹೋಗಿ ಕಸರತ್ತು ಮಾಡಿ ಹುರಿಗೊಳಿಸಿದ ಮೈಕಟ್ಟು ನೋಡುತ್ತಿದ್ದರೆ ಹೆಂಗಳೆಯರೇನು ಗಂಡಸರೇ ಅವನ ಮೈ ಮಾಟಕ್ಕೆ ಸೋತು ಹೊಗುತ್ತಿದ್ದರು.
ಪಿಸುದನಿಯಲ್ಲಿ "ಇದ್ದರೆ ಇವನ ತರ ಎದೆ, ತೋಳು, ತೊಡೆ ಇರ್ಬೇಕು" ಅಂತ ಪುರುಷರೇ ಅಂದು ಕೊಳ್ಳುತ್ತಿದರು. ಇನ್ನು ಆ ಊರಿನ ಹುಡುಗಿಯರು ಕಣ್ಣಂಚಿನಲ್ಲೇ ಅವನನ್ನ ಮನ ತುಂಬಿಕೊಳ್ಳುತ್ತಿದ್ದರು. ಶಿವು ನೋಡಲು ಸುಮಾರಾಗಿದ್ದರು ಅವನು ಸದೃಢ ದೇಹ ಎಲ್ಲರನ್ನು ಆಕರ್ಷಿಸುತಿತ್ತು. ಹಾಗೆ ಬುಲ್ಲೆಟ್ ಮೇಲೆ ಕೂರಲು ಅನುವಾಗಲೆಂದು ಮೇಲೆತ್ತಿ ಬಿಗಿಯಾಗಿಯೇ  ಕಟ್ಟುತ್ತಿದ್ದ ಲುಂಗಿ, ಅದರೊಳಗಿಂದ ಚಾಚಿದ ರೋಮಭರಿತ ತೊಡೆಗಳು, ಚಳಿಯಾಗಲಿ ಬಿಸಿಲಾಗಲಿ ಅವನು  ಪಟ್ಟಣದಲ್ಲಿ ತಗೊಂಡ ಬನಿಯನ್ನು ಅವನ ಎದೆಯನ್ನ ಅಪ್ಪಿ ಹಿಡಿದ್ದಿತ್ತು. ಹಾಗೆ ಅವನಿಗೂ ಬುಲ್ಲೆಟ್ ಗೂ ಹೇಳಿ ಮಾಡಿಸಿದಂತೆ ಇತ್ತು.

4 comments:

ಕುರುಡು ಪ್ರೀತಿಯಿಂದ..

ಕುರುಡು ಪ್ರೀತಿಯಿಂದ..   ಹೇಗೆ ಬರೆಯಲಿ ಈ ವಿಷಯವನ್ನು ಅಂತ ಅನಿಸುತ್ತಲೇ ಯಾಕೋ ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಅದು ನಾನು ಮಾಡಿದ ತಪ್ಪೋ, ಅವನು ಮಾಡಿದ ತಪ್ಪೋ ಅಥವಾ...