Saturday, June 26, 2021

ಕುರುಡು ಪ್ರೀತಿಯಿಂದ..

ಕುರುಡು ಪ್ರೀತಿಯಿಂದ..

 
ಹೇಗೆ ಬರೆಯಲಿ ಈ ವಿಷಯವನ್ನು ಅಂತ ಅನಿಸುತ್ತಲೇ ಯಾಕೋ ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಅದು ನಾನು ಮಾಡಿದ ತಪ್ಪೋ, ಅವನು ಮಾಡಿದ ತಪ್ಪೋ ಅಥವಾ ನಮ್ಮ ನಮ್ಮ ನಿರ್ಧಾರಗಳು ತಪ್ಪೋ ತಿಳಿಯದಾಗಿದೆ. 

ಅಂದು ಅವನು ಅಂದರೆ ಕಾರ್ತಿಕ್ ಮೆಸೇಜ್ ಮಾಡಿ ನಿಮ್ಮ ಫೇಸ್ಬುಕ್ ಪೋಸ್ಟ್ಗಳು  ಚೆನ್ನಾಗಿವೆ. ನೀವು ಕವಿನಾ ಅಂದು ಕೇಳಿದಾಗ ಅರೆಬರೆ  ಕವಿಯಾಗಿದ್ದ ನಾನು ಖುಷಿಯಿಂದ ಒಪ್ಪಿಕೊಂಡೆ. 

"ಭೇಟಿಯಾಗೋಣವಾ ?"

"ಹೌದು, ನಾನೀಗ ಮೈಸೂರಲ್ಲಿ ಕೆಲಸ, ನಿಮ್ಮದು" ಎಂದಾಗ ಮೈಸೂರ ಹಳ್ಳಿಯೊಂದರಲ್ಲಿ ಎನ್ ಜಿ ಓ ದಲ್ಲಿ ಕೆಲಸ,   ನನ್ನೂರು ಹಾಸನ ಎಂದು ಒಂದು ದಿನಭೇಟಿಯಾಗಿ ಹೊರಟು ಹೋದ. ಎಲ್ಲರಂತೆ ಇವನೂ ಒಬ್ಬ ಬರಿಯ ಅಂದ ಚೆಂದ ನೋಡಿ ಬರೋದು ಹೇಗೂ ನಾನು ನೋಡೋಕೆ ಚೆಂದ ಇಲ್ಲ ಅಂತ ಅವನ ಮರೆತೇ. ಒಂದೆರಡು ಬಾರಿ ಫೋನ್ ನಲ್ಲಿ ಮಾತಾಡಿಯಾಗಿದ್ದರೂ ಅಷ್ಟೊಂದು ಆಸಕ್ತಿ ಬರಲಿಲ್ಲ. 

ಆರು  ತಿಂಗಳ ನಂತರ ಒಂದಿನ ಅವನ ಅಕ್ಕ ನ ಮಗನ ಕಾಲೇಜು ಬಗ್ಗೆ ವಿಚಾರಿಸುತ್ತಾ ಮತ್ತೆ ಪುನಃ ಭೇಟಿಯಾದೆವು. ನಂತರದ ದಿನಗಳಲ್ಲಿ ನಮ್ಮ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತ ಸ್ವಲ್ಪ ಹತ್ತಿರವಾದೆವು. ೨೦೧೬ ಫೆಬ್ರುವರಿ ೧೪ ರಂದು ವ್ಯಾಲೆಂಟೈನ್ಸ್ ದಿನ ಕಾರ್ತಿಕ್ ನನ್ನ ಬೆಂಗಳೂರಿನ ಮನೆಗೆ ಬಂದ. ಬರುವಾಗ ಒಂದು ಸ್ವೆಟ್ ಶರ್ಟ್ ಸಹ ತಂದು  ಕೊಟ್ಟು, ನನಗೆ ನಿನ್ನ ಸ್ನೇಹ , ಪ್ರೀತಿ ಬೇಕು. ನಾನು ಸೆಕ್ಸ್ ಅನ್ನು ಇಷ್ಟ ಪಡುವುದಿಲ್ಲ  ಇದಕ್ಕೆ ಒಪ್ಪಿದರೆ ನಾವು ಕೊನೆಯವರೆಗೂ ಜೀವನ ಸಂಗಾತಿಗಳಾಗಿ ಇರೋಣ ಎಂದು ಹೇಳಿದ. ನನಗೂ ಕಾರ್ತಿಕ್ ನ ಮಾತು ಸರಿಯೆನಿಸಿತು. ಈ ಸೆಕ್ಸ್ ಅನ್ನೋದು   ಮಾತ್ರ ನಿಜವಾದ ಸ್ನೇಹ ಪ್ರೀತಿ ಅಪರೂಪ ಒಳ್ಳೆಯ ಗೆಳೆಯ ನನಗಾಗಿಯೇ ಸಿಕ್ಕಿದಾನೆ ಎಂದು ನನ್ನ ಮನಸ್ಸಲ್ಲಿರುವ ಒಂದು ಹಲವು ದಿನಗಳ ಕನಸನ್ನ - ಒಂದು ಏನ್ ಜಿ  ಓ ಅನ್ನು ಶುರು ಮಾಡುವ ಆಸಕ್ತಿಯನ್ನು ಹೇಳಿಕೊಂಡೆ. ಅದಕೆ ಕಾರ್ತಿಕ್ ಮಾಡಬಹುದು ಆದ್ರೆ ಬೆಂಗಳೂರಲ್ಲಿ ಆಗಲ್ಲ ಬೇಕಿದ್ದರೆ ಮೈಸೂರುಅಲ್ಲಿ ಎಂದ. ನನಗೂ ಅವನ ಮಾತು ಸರಿಯೆನಿಸಿತು. ಹಾಗೆ ನನ್ನ  ಕೆಲಸವೂ ಬೇಸರ ತರಿಸಿತ್ತು. ನನ್ನ ಸಹೋದರ ಸಹೋದರಿಯರ ಒಪ್ಪಿಸಿ ನಮಗೆ ಅಂತ ಇದ್ದ  ಮನೆಯನ್ನ ಮಾರಿಸಿ  ನಾನು   ಒಂದು ಬಾಡಿಗೆ ಮನೆ ಹಿಡಿದು ನನ್ನ ಮುಂದಿನ ಕನಸುಗಳನ್ನು ಹೆಣೆಯುತ್ತಾ,  ಪ್ರತಿದಿನ ಅವನ ಜೊತೆಯಲ್ಲಿಬಾಳುವ ಆಸೆಯೊಂದಿಗೆ ಅವನೊಂದಿಗೆ ಮಾತಾಡುತ್ತಿದ್ದೆ.

ಒಮ್ಮೆ "ಏನ್ ಜಿ ಓ ಜತೆ, ಒಂದು ಮನೆಯನ್ನೂ ಸಹ ಮಾಡಿಕೊಳ್ಳುವ, ನಮ್ಮ ಮನೇಯವರೂ ಇರ್ತಾರೆ, ನಿನ್ನ ನೋಡಿಕೊಳ್ತಾರೆ ಹಾಗೆ ನಿನ್ನ ಕೊನೆಗಾಲಕ್ಕೂ ನಿನಗೆ ಒಂದು ಆಸರೆ ಆಗುತ್ತೆ. ನಾನೂ ನಿನ್ನ ಜೊತೇಲೆ ಇರ್ತೀನಿ ಇದು ನನ್ನ ಮಾತು ಅಂದ. 

ಹೌದಲ್ವಾ ಅಂತ ನನಗೂ ಅನಿಸಿತು, ಹೂ ಆಯ್ತು ಎಂದು ಒಪ್ಪಿಗೆ ಕೊಟ್ಟೆ. ಆಮೇಲೆ ಒಂದು ದಿನ ನಂಜನಗೂಡಿನಲ್ಲಿ ಒಂದು ಸೈಟ್ ನೋಡಿದ್ದೀನಿ ದುಡ್ಡು ಕೊಡು ಅಂದ. ನನಗೆ ಅಲ್ಲಿ ಸೈಟ್ ತಗೊಳ್ಳೋದು ಇಷ್ಟವಿರಲಿಲ್ಲ, ಮುಂದೆ ಏನಾದರೂ ಮಾರಬೇಕಾದ  ಸಮಯ ಬಂದಾಗ ಅದರ ರೇಟ್  ಸಿಗೋಲ್ಲ ಎಂದೆ. ಅದಕ್ಕೆ ಕಾರ್ತಿಕ್ "ನಿನಗೆ ನಾನಂದ್ರೆ ಇಷ್ಟ ಇಲ್ಲ ದುಡ್ಡು ಬಂದಿದೆ, ನಿನಗೆ ನನ್ನ ಮೇಲೆ ಪ್ರೀತಿ ಇಲ್ಲ, ಬರಿ ನಿಂದು ಬಣ್ಣ ಬದಲಾಯಿಸೋ ಬುದ್ಧಿ" ಎಂದು ಹೀಗಳೆದ. ನನಗೂ ಅವನ ಮಾತು ಸರಿಯೆನಿಸಿ ಪಾಪ ನಂಗೋಸ್ಕರ ಮನೆಯನ್ನ ಕಟ್ಟಿಸಲು ಸಿದ್ಧನಾಗಿದ್ದಾನೆ, ಕೊನೆಯವರೆಗೂ ನನ್ನ ನೋಡಿಕೊಳ್ಳುತ್ತಾನೆ, ಅವರ ಮನೆಯವರೂ ನನ್ನ ನೋಡಿಕೊಳ್ತಾರಲ್ಲಾ ಎಂದು ದುಡ್ಡು ಕೊಟ್ಟು ಸೈಟ್ ತಗೋಳ್ಳೋಣ  ಅಂದೆ. ಆದರೆ ಅವನು ಸೈಟ್ ತಗೊಂಡಿದ್ದು ನನ್ನ ಹೆಸರಿನಲ್ಲಿ ಅಲ್ಲ ಅವನ ಅಕ್ಕ ನ ಹೆಸ್ರಲ್ಲಿ. ಕೇಳಿದ್ದಕ್ಕೆ "ನೀನು ನಾನು ಹೇಳಿದ ಸಮಯಕ್ಕೆ ಬರಲಿಲ್ಲ, ಅದಕ್ಕೆ ಅಕ್ಕನ ಹೆಸರಲ್ಲಿ ಮಾಡಿಸಿದ್ದು. ನಿನಗೆ ಬೇಕಾದ ಸಮಯದಲ್ಲಿ ನಿನ್ನ ಹೆಸ್ರಲ್ಲೇ ಮಾಡಿಸ್ತೀನಿ ಏನೂ ಯೋಚನೆ ಮಾಡಬೇಡ ಅಂತ ಭರವಸೆ ನೀಡಿ, ಮುಂದೆ ಮನೆ ಕಟ್ಟುವ ಯೋಜನೆ ಮಾಡುವ ಅಂದ. ಅದರಂತೆ ಕಟ್ಟುವ ಅಂತ ಯೋಚಿಸುತ್ತಿರುವಾಗಲೇ, ಕಾರ್ತಿಕ್ 

"ನನ್ನ ಬರ್ಥಡೇ ಬರ್ತಿದೆ ನನಗೊಂದು ಒಳ್ಳೆ ಗಿಫ್ಟ್ ಕೊಡಬೇಕು" ಎಂದು ಹಠ ಹಿಡಿದ. 

ನಾನು " ಅಲ್ವೋ, ನಿನಗೆ ಬೇರೆಯಲ್ಲ ಕೊಡಿಸಿದ್ದೀನಲ್ಲ ಮತ್ತೇನು ಬೇಕು" ಅಂದೆ. 

"ನಂಗೊಂದು ಚಿನ್ನದ ಬ್ರೇಸ್ ಲೆಟ್ ಕೊಡಿಸು" ಎಂದು ಹಠ ಹಿಡಿದ. 

ಸರಿ ಗಿಫ್ಟ್ "ನನ್ನವನಿಗಾಗಿಯೇ " ಅಲ್ವ ಎಂದು ಅವನಿಗೆ ೩೨ ಸಾವಿರದ ಒಂದು ಚಿನ್ನದ ಬ್ರೇಸ್ ಲೆಟ್ ಕೊಡಿಸಿದೆ. "ಅದು ಚಿಕ್ಕದು, ಡಿಸೈನ್ ಸರಿ ಇಲ್ಲ, ನಿನಗೆ ಕೊಡಿಸಲು ಇಷ್ಟ ಇಲ್ಲ" ಅಂದ.

ನನಗೂ ಬೇಸರ ಆಯ್ತು, ನಾನು ನಿನ್ನ ನಂಬಿ, ನಿನ್ನ ಪ್ರೀತಿಯನ್ನ ನಂಬಿ ಇದನ್ನೆಲ್ಲಾ ಮಾಡ್ತಾ ಇದ್ದೀನಿ ಅದೂ ನನ್ನ ಕೊನೆಗಾಲದಲ್ಲಿ ನೋಡಿಕೊಳ್ತೀನಿ, ನನ್ನಂತ ತಬ್ಬಲಿಯನ್ನ ಪ್ರೀತಿಸಿ ನೋಡಿಕೊಳ್ತೀಯಲ್ಲ, ನಿನಗೆ ನನ್ನ ಹೃದಯ ಸಾಮ್ರಾಜ್ಯವನ್ನೇ ಕೊಡ್ತೀನಿ" ಅಂತ ಮನಸಲ್ಲೇ ಅಂದುಕೊಂಡು ಸುಮ್ಮನಾದೆ. 

ಈ ಮಧ್ಯದಲ್ಲಿ ಅವನ ನಿಜವಾದ ಹೆಸರು ನಾಗರಾಜ್ ಅಂತನೂ ತಿಳಿಯಿತು. 

ಅದನ್ನ ಅವನು ಒಂದು ತಿಂಗಳಲ್ಲಿಯೇ ಗದಗ್ ಇಂದ ಬರುವಾಗಲೇ ರೈಲಿನಲ್ಲಿ ಕಳೆದುಕೊಂಡ. ಅದನ್ನ  ಇನ್ನೊಬ್ಬ ಫ್ರೆಂಡ್ ನಿಂದ ತಿಳಿದುಕೊಂಡೆ. ಆದರೂ ಅವನಿಗೆ ಏನೂ ಹೇಳದೆಯೇ ಸುಮ್ಮನಾದೆ. ನನ್ನ ಬೆವರಿನ ಹಣವಾದ್ರು ಅವನು ಅದನ್ನ ಉಳಿಸಿಕೊಳ್ಳಲಿಲ್ಲ ಅನ್ನೋ ಭಾವನೆ ಇನ್ನೂ ಇದೆ. ನಂತರ  NGO ಮಾಡುವ ಹಂಬಲ ನನಗೆ ಜಾಸ್ತಿ ಆಯ್ತು. 

NGO ಅಂದ್ರೆ ತುಂಬಾ ಕಷ್ಟ ಆಗುತ್ತೆ ಸ್ವಂತ ಜಾಗ ಇರಬೇಕು, ಇದ್ದರೆ ಒಳ್ಳೆಯದು ಅದಕೆ ಒಂದು ಸಣ್ಣ ಮನೆ ಮಾಡೋಣ ಅದರ ಮೇಲೆ ಒಂದು ಹಾಲ್ ಮಾಡಿ ಅಲ್ಲಿ NGO ಶುರು ಮಾಡಿದರೆ ಸರಿ ಹೋಗುತ್ತೆ,ನಾವಿಬ್ಬರು ಜೊತೆಯಾಗಿ ಒಟ್ಟಿಗೆ ಅಲ್ಲಿ ಇರಬಹುದು ಎಂದು ಆಸೆ, ಕನಸು ಮೂಡಿಸಿದ. ನಾನು ಅದನ್ನ ನಂಬಿ ಸೈಟ್ ತೆಗೆದುಕೊಳೋದು  ಅನ್ನುವಷ್ಟರಲ್ಲಿ ಅವನು ಒಂದು ಸೈಟ್ ಅಡ್ವಾನ್ಸ್  ಕೊಟ್ಟು ನೀನು ದುಡ್ಡು ಕೊಟ್ಟರೆ ಸೈಟ್ ತಗೊಳ್ಳಬಹುದು ಅಂದ. ನಾನು ಸೈಟ್ ರಿಜಿಸ್ಟ್ರೇಷನ್ ಸಮಯದಲ್ಲಿ ಹೋಗಲಾಗಲಿಲ್ಲ, ನನ್ನ ಹೆಸರಲ್ಲಿ ಸೈಟ್ ಮಾಡಿಸದೇ ಅವನ ಅಕ್ಕನ ಹೆಸ್ರಲ್ಲಿ ಸೈಟ್ ಮಾಡಿದ ಅದು ನನಗೆ ಹೇಳದೆ.. ನನಗೆ ತುಂಬಾ ಬೇಸರವಾಯಿತು . ಮನೆ ಕಟ್ಟುವಾಗ ನಿನ್ನ ಹೆಸರಿಗೆ ಮಾಡ್ತೀನಿ ಬಿಡು ಎಂದ. ಅದನ್ನ ನಂಬಿದೆ, ಮನೆ ಅಂದರೆ ನನ್ನ ಕನಸಿನ ಅರಮನೆ ಆಗಿತ್ತು ಅದು. ಮನೆ ಅಂದರೆ ಹೀಗಿರಬೇಕು, ಹಾಲ್, ರೂಮ್, ಕಿಚನ್ ಬಾತ್ರೂಮ್, ಮನೆ  ಮುಂದೆ ಗಾರ್ಡನ್ ಏನೇನೋ ಕನಸಾಗಿತ್ತು. 

ಮುಂದೆ ಮನೆ ಕಟ್ಟಲು ನಮೂನೆ ಗಳನ್ನ ನೋಡ್ಬೇಕಲ್ಲ, ನಾನು ಅಲ್ಲಿ ಇಲ್ಲಿ ವಿಚಾರಿಸುತ್ತಾ ಇದ್ದೆ. ಅಷ್ಟರಲ್ಲಿ ಒಂದು ದಿನ ಮನೆಗೆ ನಾಗರಾಜ್ ಅಂದರೆ ಕಾರ್ತಿಕ್ ರಾತ್ರಿ 1 ಗಂಟೆಗೆ ಬಂದ . ನನ್ನ ನೋಡಲು ಇಂತಹ ಅವೇಳೆಯಲ್ಲಿ ಬಂದನಲ್ಲ ಎಷ್ಟೊಂದು ಅಕ್ಕರೆ ಪ್ರೀತಿ ಇದೆ ಅಂತ. ಅದು ಬರಿ ತೋರ್ಪಡಿಕೆ ಪ್ರೀತಿ ಅವನು ಬಂದು ಹೋಗುವುದಕ್ಕೆ ಒಂದು ಜಾಗ ಬೇಕಿತ್ತು. ಉಳಿದುಕೊಳ್ಳಲು ಸ್ಥಳ ಬೇಕಿತ್ತು ಅಷ್ಟೇ. ಹಾಗೆ ಅವನು ತೋರಿಸಿದ ಪ್ರೀತಿಯೆಲ್ಲ ಬರಿ ನನ್ನಿಂದ ಉಪಯೋಗಿಸಿಕೊಳ್ತಿದ್ದ ನನ್ನ ಹಣ, ಜಾಗ ಎಲ್ಲಾ. 

ಹೀಗಿರುವಾಗ ಅವನ ಅಪ್ಪನಿಗೆ ಕಾಲು ನೋವು ಜಾಸ್ತಿ ಆಗಿತ್ತು ಅದಕ್ಕೆ ಪರಿಹಾರಕ್ಕೆ ನನ್ನ ಮನೆಗೆ ಮಲ್ಲೇಶ್ವರಕ್ಕೆ ಅವನ ಅಪ್ಪ, ಅಮ್ಮ ಹಾಗೂ ಯತಿ ಮೂವರು ಸುಮಾರು ೧೦ ದಿನಗಳ ಕಾಲ ನನ್ನ ಮನೆಯಲ್ಲೇ ತಂಗಿದ್ದರು. ಅವರ ಊಟ ಉಪಚಾರ ಬೆಳಿಗ್ಗೆ ಅವರು  ಕ್ಲಿನಿಕ್ ಗೆ ಹೋಗಲು ಆಟೋ ಎಲ್ಲವನ್ನು ನಾನೇ ಸಿದ್ದಪಡಿಸಿ  ಆಫೀಸ್ ಗೆ ಹೊರಟು ಸಂಜೆ ಬರುವಾಗ ಏನಾದರೂ ತಿನ್ನುವುದಕ್ಕೆ ತರುತ್ತಿದ್ದೆ. ಮತ್ತೆ ಊರಿಗೆ ವಾಪಸು ಹೋಗ್ಬೇಕಾದ ದಿನ ನಾನೇ ರೈಲ್ವೆ ಸ್ಟೇಷನ್ ಗೆ ಕರ್ಕೊಂಡುಹೋಗಿ ಅಲ್ಲಿ ಬಗ್ಗಿ ಬುಕ್ ಮಾಡಿ ಟ್ರೈನ್ ಹತ್ತಿಸಿ , ಆಫೀಸ್ ಗೆ ಲೇಟ್ ಆಗಿ ಹೋಗಿದ್ದಕೆ ಬೈಯಿಸಿಕೊಂಡೆ. 

ಹೀಗೊಮ್ಮೆ ಬಂದವನೇ ನಾನು ಆಫೀಸ್ ನಿಂದ ಬರುವಾಗಲೇ "ನಾನು ರಾಮನಗರ ಹೋಗ್ತಿದೀನಿ ಅಲ್ಲಿಗೆ ಬಾ" ಫೋನ್ ಮಾಡಿ ಹೋಗಿದ್ದ. ಯಾರ ಮನೆಗೆ ಹೋಗಿದ್ದಾನೆ ಅದು ಸಂಜೆ ? ಅಂತ ನಾನು ತಲೆ ಕೆಡಿಸಿಕೊಂಡು ಬೆಳಿಗ್ಗೆ ರಾಮನಗರಕ್ಕೆ ಹೋದೆ. ಅಲ್ಲಿನ ಬಸ್ ಸ್ಟಾಪ್ ಹತ್ತಿರ ಅವನ ಫ್ರೆಂಡ್ ಪ್ರಸಾದ್ ಅಂತ ಬಂದ. "ಕಾರ್ತಿಕ್ ಹೇಗೆ ಪರಿಚಯ ನಿಮಗೆ ?" ಅಂದಾಗಲೇ ತಿಳಿಯಿತು ನಾಗರಾಜ್ ಫೇಸ್ ಬುಕ್ ನಲ್ಲಿ ಚಾಟ್ ಮಾಡ್ತಾ ಇದ್ದಾನೆ, ಇನ್ನು ಹಲವು ಗೆಳೆಯರು ಇದ್ದಾರೆ ಅಂತ. ಅಲ್ಲಿಗೆ ಹೋದ ನನಗೆ ತುಂಬಾ ಬೇಸರ ಕೋಪ ಒಮ್ಮೆಲೇ ಆಯಿತು. ಹಾಗೆ ಅಲ್ಲಿಂದ ಇಬ್ಬರೂ ಮೈಸೂರ್ ಗೆ ಹೊರಟೆವು. ದಾರಿಯಲ್ಲಿ ಹೋಗುತ್ತಾ "ಮನೆಯಲ್ಲಿ ಮತ್ತೆ ಮಾತಾಡಬೇಡ, ಜಗಳ ಆಡ್ಬೇಡ. ಆಡೋ ಹಾಗಿದ್ದರೆ ಬರಲೇ ಬೇಡ" ಅಂದ. 

ಅಲ್ಲಿಂದಲೇ ಇಳಿದು ಬೆಂಗಳೂರಿಗೆ ವಾಪಾಸ್ ಆಗಲು ಬಸ್ ಹತ್ತಿದೆ. ನಾನು ಬರದೇ ಇದ್ದದ್ದು ನೋಡಿ ಮತ್ತೆ ಬಾ ಅಂತ ಪೀಡಿಸಿ ಕರೆಸಿಕೊಂಡ. ಮನಸ್ಸಿಲ್ಲದೆ ನಾನು ಹೋದೆ. ರಾತ್ರಿ ನನ್ನ ಗೆಳೆಯನೊಬ್ಬ ಕರೆ ಮಾಡಿ ಮಾತಾಡುವಾಗ ನಾಗರಾಜ್ ವಿಷಯ ಬಂತು. ನಂತರ "ನನ್ನ ಬಗ್ಗೆ ನೀವು ಮಾತಾಡೋದು ಏನು, ಹಾಗೆ ಹೀಗೆ, ನೀನು ಮಾಡಿರೋ ಸಹಾಯ ಎಲ್ಲ ಶಾಟಕ್ಕೆ ಸಮ" ಅಂತ ಅಂದುಬಿಟ್ಟ.  ಅಂದು ನನ್ನ ಮನಸ್ಸು ಕದಡಿ ಹೋಯಿತು. ಎಷ್ಟು ಮಾಡಿದರೂ ಅಷ್ಟೇ ನಾ ಅಂದುಕೊಂಡು ನಿದ್ರೆಯಿಲ್ಲದೆ ಮಲಗಿದೆ. ಬೆಳಿಗ್ಗೆ ಎದ್ದು "ಸಾರೀ , ನೀನು ಕೋಪ ತರಿಸಿದಕ್ಕೆ ಹಾಗೆ ಮಾತಾಡಿದ್ದು" ಅಂತೆಲ್ಲ ಅಂದು 

ನಂತರ ಮನೆ ಕಟ್ಟಲೇಬೇಕೆಂದು ಹಠ ಹಿಡಿದ, ಹೇಗೂ ನಾನು ಮುಂದೆ ಅಲ್ಲಿಯೇ ಜೀವನ ಮಾಡಬೇಕಲ್ಲ ಅಂದುಕೊಂಡು ತಿಂಗಳ ಶನಿವಾರ ಭಾನುವಾರ ವೆಲ್ಲ ಅಲ್ಲೇ ಹೋಗಿ ಮನೆಯನ್ನು ಕಟ್ಟಿಸಿದೆ. ಕಟ್ಟೋವಾಗೆಲ್ಲ ಅವನ ಅಣ್ಣ,ಇನ್ನೊಬ್ಬ, ಇವನು ಮನೆಯವರು ಎಲ್ಲ ಸೇರಿಕೊಂಡು ಮನೆಯನ್ನು ಕುಲಗೆಡಿಸಿದರು. ನನ್ನ ಪ್ರೀತಿಯ ಮನೆ ಅದಾಗಿರಲಿಲ್ಲ. ಆದರೂ ಅದನ್ನು ಜತನದಿಂದಲೇ  ಕಟ್ಟಿಸಿದೆ. ಕೊನೆ ಕೊನೆಗೆ ನನಗೂ ನಾಗರಾಜನಿಗೂ ಹಣದ  ವಿಷಯದಲ್ಲಿ ಜಗಳ ಬರುತ್ತಲೇ ಇತ್ತು. ಯಾವಾಗಲೂ ನಾನೇ ದುಡ್ಡು ಕೊಡಬೇಕಾ ನೀನು ಹಾಕು ಅಂದೆ, ಇದು ನಿನ್ನ ಮನೆ ಬೇಕಿದ್ದರೆ ನೀನೆ ಹಾಕು, ಬಂದು ಇರು ಅಂದ. ಅದಕೇ ನಾನು ನನ್ನ ಹೆಸರಿಗೆ ಮಾಡಿಸು ಅಂದೆ. ಸಮಯ ಬರಲಿ ಮಾಡಿಸುತ್ತೇನೆ ಅಂತ ಮುಂದೂಡಿದ. ಮನೆ ಇನ್ನೇನು ಮುಗಿಯುತ್ತೆ ಅನ್ನೋವಾಗ ಅವನು ಕೂಡ ೨. ೫ ಲಕ್ಷ ಹಾಕಿದ. ಮೋಲ್ಡ್ ಹಾಕುವ ಸಮಯದಲ್ಲಿ ೩ ದಿನ ರಜೆ ಹಾಕಿ ಅಲ್ಲಿಯೇ ಇದ್ದೆ, ನನಗೆ ಡಯಾಬಿಟಿಸ್ ಶುರು ಆಗಿದ್ದು ಆಗಿನಿಂದಾನೇ. 

ಅಂತೂ ಮನೆ ಗೃಹಪ್ರವೇಶದ ಸಮಯ ಬಂದಿತು, ದುಡ್ಡಿಗೆ ತುಂಬಾ ಹಿಂಸೆ ಕೊಟ್ಟ. ಕೊನೆಗೆ ಗೃಹಪ್ರವೇಶಕ್ಕೆ ೧ ಜೊತೆ ಬೆಳ್ಳಿ ದೀಪ ಕೊಟ್ಟೆ ಅದೂ ನನ್ನ ಮನೆಗೆ ನಾವು ಕೊಂಡುಕೊಂಡ ಉಡುಗೊರೆ .. ಅವನ ಅಣ್ಣನ ಮಕ್ಕಳಿಗೆ, ಅಕ್ಕನ ಮಗನಿಗೆ ನನ್ನ ಹಣದಿಂದಲೇ ಬಟ್ಟೆಗಳನ್ನ ಕೊಡಿಸಿದ. ಜೊತೆ ಅಡುಗೆ ಭಟ್ಟರಿಗೆ, ಹೂವಿನ ಅಲಂಕಾರಕ್ಕೆ ನಾನೇ ದುಡ್ಡು ಕೊಟ್ಟೆ. 

ಆ ಗೃಹಪ್ರವೇಶದಲ್ಲಿ ಅವನ ಹಳೆಯ ಗೇ ಸ್ನೇಹಿತರನ್ನು ಕರೆದಿದ್ದ. ಅವರಲ್ಲಿ ಒಬ್ಬ ನಿಂಗಪ್ಪ ಅಂದರೆ ಫೇಸ್ಬುಕ್ ನಲ್ಲಿ ರೋಹನ್ ಅಂತ ಸುಳ್ಳು ಹೆಸರಿನಲ್ಲಿ ೨೦೧೪ರಲ್ಲಿಯೇ ಚಾಟ್ ಮಾಡಿದ್ದ. ಅವನು ಇವನ ಆಪ್ತ ಗೆಳೆಯನಂತೆ ನಟಿಸಿದ. ಮನೆಯಲ್ಲಿ ನಾಗರಾಜ್ ಊಟ ಮಾಡಿದ ನಂತರ ಅವನೇ ಊಟದ ತಟ್ಟೆಯನ್ನ ತೊಳೆದಾಗಲೇ ನನಗೆ ಅನುಮಾನ ಬಂದಿತು. ಅವನ ವೈಯಾರ ನೋಡಿ ಇದು ಅದೇ ಇರಬೇಕು ಅಂತ  ಇವನು ತುಂಬಾ ಮುಂದುವರೆದಿದ್ದಾನೆ ಅಂತ . ಆದರೂ ಅವನು ಹಾಗಿಲ್ಲ ಅಂದುಕೊಂಡು ಬೆಂಗಳೂರಿಗೆ ಬಂದೆ. ಯಾಕೆ ಅವನ ಮೇಲೀನ ಪ್ರೀತಿಯಿಂದ ಅಲ್ಲ ಕುರುಡು ಪ್ರೀತಿಯಿಂದ... 

 ಮನೆಗೆ ಗೀಸರ್ ಬೇಕಾಗಿದೆ ಹಾಕಿಸು, ಅಂತ ಹಠ ಮಾಡಿ ನನ್ನ ಹಣದಿಂದ ಹಾಕಿಸಿಕೊಂಡ. ಜೊತೆಗೆ ಸೋಪ್, ಟೂತ್ ಬ್ರಷ್ ಸ್ಟ್ಯಾಂಡ್ಸ್, ವಿಂಡೋ ಸ್ಕ್ರೀನ್ ರೈಲಿಂಗ್ಸ್ ಎಲ್ಲ ನನ್ನ ೧೨ ಸಾವಿರದಿಂದ ಹಾಕಿಸ್ಕೊಂಡ. ನಾನು ಇರಲಿ ಬಿಡು ಅಂತ  ಸುಮ್ಮನಾಗಿ ಅಂದೇ ಬೆಂಗಳೂರಿಗೆ ಹೊರಟು ಬಂದೆ. 

 ನನ್ನ ಹತ್ರ ಏನೆಲ್ಲಾ ಕೆಲಸ ಹಾಗೂ ಅನುಕೂಲಗಳನ್ನೆಲ್ಲ ಮಾಡಿಸಿಕೊಂಡ.  ತುಂಬಾನೇ ನನಗೆ ಬೇಸರ ಪಡಿಸಿದ. ನಾನಿಲ್ಲದೇ ಇರುವಾಗ ಒಮ್ಮೆ  ಯಾರೋ ಪ್ರಸಾದ್ ಅಂತ ಮನೆಗೆ ಕರಕೊಂಡು ಬಂದಿದ್ದ. ಹಾಗೆ ಒಮ್ಮೆ ನಾನಿದ್ದಾಗಲೇ ಅವನನ್ನು ಕರ್ಕೊಂಡು ಬಂದಿದ್ದ, ಯಾಕೆ ಅಂತ ಕೇಳಿದ್ದಕ್ಕೆ ಅವನು ಜಸ್ಟ್ ಫ್ರೆಂಡ್ ಅಂದ. ಬೇಸರ ಆಯಿತು ಜಗಳ ಆಡಿದೆ. ಅದಕ್ಕೂ ಬೈದ.. ಹೊಡೆದ. ನನ್ನ ಈ ರೀತಿ ಹಿಂಸೆ ಕೊಡಬೇಡ ನಿನಗೆ ಒಳ್ಳೇದಾಗೋಲ್ಲ ಅಂತೆಲ್ಲ ಹೇಳಿದರೂ ನೀನೇನು ದೇವರಲ್ಲ ಒಳ್ಳೇದು ಕೆಟ್ಟದ್ದು ಮಾಡೋಕೆ ಅಂತ ಅಂದ

ಈ ಮಧ್ಯ ಅವನ ಅಕ್ಕನ ಮಗ ಯತಿರಾಜ್ ಗೆ ಬೆಂಗಳೂರಿನಲ್ಲಿ ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟ್ ಸಿಕ್ಕಿತು. ಆಗ ಅವನನ್ನು ನನ್ನ ಮನೆಯಲ್ಲಿಯೇ ೩ ತಿಂಗಳು ಇರಿಸಿಕೊಂಡು ಸಾಕಿದೆ. ಆಗಾಗ್ಗೆ ಊರಿಂದ ಸ್ವಲ್ಪ ತರಕಾರಿ, ಅಕ್ಕಿ ಒಮ್ಮೊಮ್ಮೆ ಊಟ ಕಾಳುಗಳನ್ನೂ ತಂದು ಕೊಡುತ್ತಿದ್ದ. ಮೂರು ನಾಲ್ಕು ತಿಂಗಳ ನಂತರ ತಿಳಿಯಿತು ಆತ ಕಾಲೇಜಿಗೆ ಹೋಗಿಲ್ಲ ಅಂತ. ಸುಮ್ಮನೆ ಹೊರಗೆ ಸುತ್ತಾಡಿಕೊಂಡು ಬರುತ್ತಿದ್ದ ಅಂತ. ನನಗೆ ಬೆಳಗಿನ ಟಿಫನ್ ಇಲ್ಲದೆ ಇದ್ದರೂ ಅವನಿಗೆ ಊಟದ ಡಬ್ಬ ಸಿದ್ಧ ಮಾಡಿ ಕೊಡುತ್ತಿದ್ದೆ. ಒಮ್ಮೆ ಯತಿ ಮನೆಯಿಂದ ಕಣ್ಮರೆಯಾದ ಅವನನ್ನು ಹುಡುಕಲು ಅವನ ಕಾಲೇಜು ಗೆ ರಾತ್ರಿ ೧೦ಕ್ಕೆ ನಾನು ಮತ್ತು ನವೀನ ಪೀಣ್ಯ ಕಾಲೇಜು ಗೆ  ವಿಚಾರಿಸಿಕೊಂಡು ಬಂದೆವು. ನಂತರ ಒಂದು ದಿನ ನನಗೆಲ್ಲಾ ಟೆನ್ಶನ್ ಇತ್ತು, ಮಾರನೆಯ ದಿನ ಅವನು ಸಿಕ್ಕ ಅಂತ ಸುದ್ದಿ ಬಂತು.  ಮತ್ತೊಂದು ತಿಂಗಳ ನಂತರ ಅವನ ಕಾಲೇಜಿಗೆ ಹೋಗಿ ವಿಚಾರಿಸ್ಕೊಂಡು ಬಂದೆವು. ಆಗ ತಿಳಿಯಿತು ಅವನಿಗೆ ಮಾನಸಿಕ ಖಾಯಿಲೆ ಇದೆಯಂದು. ನಂತರದ ದಿನಗಳಲ್ಲಿ  ಅವನನ್ನ ಪ್ರಸನ್ನ ಸಲಹಾ ಕೇಂದ್ರ ದಲ್ಲಿ ಕೌನ್ಸೆಲಿಂಗ್ ಮಾಡಿಸಿದೆ. ಯಾಕೆ ಅವನ ಮೇಲೀನ ಪ್ರೀತಿಯಿಂದ ಅಲ್ಲ ಕುರುಡು ಪ್ರೀತಿಯಿಂದ... 

 ನಂತರ ಮುಂದೆರಡು ತಿಂಗಳಿನಲ್ಲಿ  ಯತಿ ಮತ್ತು ಅವನ ಅಮ್ಮ ಯಾವುದೊ ಒಂದು ಆಶ್ರಮದಲ್ಲಿ- ಕನಕಪುರದಲ್ಲಿ ಸೇರಲಿಕ್ಕೆ ನನ್ನ ಮನೆಯಲ್ಲಿ ಒಂದು ವಾರ ಇದ್ದರು. ಆಗಲೂ ಅವರಿಬ್ಬರನ್ನೂ ಮನೆಯಲ್ಲಿರಿಸಿ ಕೊಂಡಿದ್ದೆ. ಅವರನ್ನು ಆಶ್ರಮಕ್ಕೆ ಸೇರಿಸಲು ಕನಕಪುರಕ್ಕೆ  ೬ಕ್ಕೆ ಮನೆ ಬಿಟ್ಟು ಅಲ್ಲಿಗೆ ೧೦ಕ್ಕೆ ಹೋಗಿದ್ದೆ. ಅಲ್ಲಿ ೬೦೦ ರೂಪಾಯಿಗಳನ್ನು ಅಡ್ವಾನ್ಸ್  ಅಂದರು.  ಯತಿ ಹತ್ರ ಇಲ್ಲವೆಂದಾಗ ನಾನು ನಾಗರಾಜ್ ಗೆ ಫೋನ್ ಮಾಡಿದೆ. ಆಗ ಅವನು ನೀನೆ ಕೊಡು,  ಸಹಾಯ ಮಾಡಲಿಕ್ಕೆ  ಆಗೋಲ್ವಾ, ಹಾಗೆ  ಅವತ್ತೆಲ್ಲ ಅಲ್ಲೇ ಇದ್ದು ಸಂಜೆ ಹೋಗು ಅಂದ. ನಾನು ಆಗಲ್ಲ ಅಂದೆ, ನನ್ನ ಅಕ್ಕ, ಯತಿ ಗೆ ಏನಾದರೂ ಆಗಬೇಕು ನಿನ್ನ ಸಾಯಿಸ್ಬಿಡ್ತೀನಿ ಅಂದ .

 ಮುಂದೆ ಕರೋನ ವಕ್ಕರಿಸಿತು...  ಆಗ ನಾಗರಾಜ್ ಮನೆಗೆ ಹೋಗದೆ ಸೀದಾ ನನ್ನ ಮನೆಗೆ ಹಾಜರಾದ ಬರೋಬ್ಬರಿ ೪೫ ದಿನಗಳು ನನ್ನ ಜೊತೆಯಲ್ಲೇ ಇದ್ದ. ಅವನ ಮೊಬೈಲ್ ಹಾಳಾಗಿತ್ತು ಅವನಿಗೆ ಕೈ ಕಟ್ಟಿಹಾಕಿದ ಆಗಿತ್ತು. ನನಗೆ ಆಫೀಸ್ ಕೆಲಸ ವರ್ಕ್ ಫ್ರಮ್ ಹೋಂ ಶುರು ಆಗಿತ್ತು. ನನಗೂ ಕೆಲಸ ಜಾಸ್ತಿ ಆಗ್ತಾ ಇತ್ತು. ಅಲ್ಪ ಸ್ವಲ್ಪ ಆರೋಗ್ಯವೂ ಹದಗೆಡುತ್ತಾ ಇತ್ತು. ಅವನಿದ್ದ ಆ ೪೫ ದಿನಗಳೂ ಸಹ ಒಂದಲ್ಲ ಒಂದು ವಿಶೇಷ ಅಡುಗೆ, ಸೂಪ್ಗಳು ಕಾಫಿ ಟೀ ಎಲ್ಲವೂ ಸೌಕರ್ಯ ಮಾಡಿದೆ . ತಲೆ ಕೂದಲನ್ನು ಕತ್ತರಿಸಿದೆ. ವ್ಯಾಯಾಮ ಮಾಡುವಾಗ ಸಹಾಯ  ಮಾಡುತ್ತಿದ್ದೆ. ಒಮ್ಮೆ ಹೀಗೆ ಮಾಡುವಾಗ ಬೇಕು ಅಂತಲೇ ನನ್ನ ಬೀಳಿಸಿದ. ನನಗೆ ಕೋಪ ಬಂದು ಬೇವರ್ಸಿನಾಯಿ  ಅಂತ ಬೈದೆ. ಯಾಕೆ ಬೈದೆ ಅಂತ ಕೋಪ ಮಾಡಿಕೊಂಡ. ತಪ್ಪಾಯ್ತು ಅಂತ ಕೇಳಿಕೊಂಡೆ.  ಯಾಕೆ ಅವನ ಮೇಲೀನ ಪ್ರೀತಿಯಿಂದ ಅಲ್ಲ ಕುರುಡು ಪ್ರೀತಿಯಿಂದ... 

ಹೀಗೆ ಒಮ್ಮೆ ಮೊಬೈಲ್ ವಿಷಯಕ್ಕೆ ಜಗಳ ಆಯ್ತು. ನಾನು ಫೇಸ್ಬುಕ್ ನೋಡಬೇಕು ಅಂತ ಕೇಳಿಕೊಂಡ ನಾನು ಕೆಲಸ ಇದೆ ಈಗ ಆಗೋಲ್ಲ, ನೀನು ಬೇರೇನೋ ನೋಡ್ತೀಯ ಕೊಡಲ್ಲ ಅಂದೆ. ಕೊಡು ಇಲ್ಲ ಹೊಡಿತೀನಿ, ನಾನು ಕೇಳಿದ್ರೆ ಕೊಡಲ್ಲ ಅಂತಿಯಲ್ಲ ನಾನು ನಿನಗೆ ಏನಾಗ್ಬೇಕು ಹೀಗೆ ಮಾಡ್ತಿಯಲ್ಲ ಅಂದ. ನಾನು "ನಿನ್ನ ನನ್ನ ಗಂಡ ಅಂತ ತಿಳಕೊಂಡಿದ್ದೀನಿ" ಅಂತ ಧೈರ್ಯವಾಗಿಯೇ ಹೇಳಿದೆ. ಮತ್ತು ಕೋಪದಿಂದ ನನ್ನ ತಲೆಗೆ ಮೂರು ನಾಲ್ಕು ಬಾರಿ ಹೊಡೆದ. ನಾನಗೂ ಹೊಡಿಯಬೇಕು ಅಂತ ಅನಿಸಿತು. ಛೆ ಹಾಗೆ ಮಾಡಿದರೆ ನನಗೂ ಅವನಿಗೂ ಏನು ವ್ಯತ್ಯಾಸ ಅಂತ ಸುಮ್ಮನಾದೆ. ತಕ್ಷಣವೇ ತಾನು ಅಳಲು ಶುರು ಮಾಡಿದ. ಮತ್ತೆ ಸಂಜೆಯಿಂದ ಪುನಃ ಜಗಳ ಸಮಜಾಯಿಷಿ ಮಾಡುತ್ತ ಮಾತಾಡುತ್ತ, ಮುಂದೆ ಕೆಲ ದಿನಗಳ ನಂತರ ಅವನು ತನ್ನ ನಂಜನಗೂಡಿಗೆ ಪಯಣ ಬೆಳೆಸಿದ. ನಂಗೆ ನಂಜನಗೂಡಿನ ಮನೆಯನ್ನು ನನ್ನ ಹೆಸರಿಗೆ ಯಾವಾಗ ಮಾಡಿಕೊಡ್ತಿಯಾ ಅಂದರೆ ಅದು ಸಮಯ ಬರಲಿ ಮಾಡಿಕೊಡ್ತೇನೆ ಅಂತಾನೆ ಮುಂದೂಡ ತೊಡಗಿದ.

ನನಗೂ ಇವನಿಂದ ಬೇಸರ ಆಗ್ತಿತ್ತು, ಏನಾದರೂ ಮನ್ಸು ಸಮಾಧಾನ ಆಗುತ್ತಿರಲಿಲ್ಲ. ಒಮ್ಮೆ  blued ಎಂಬ ಗೇ ಡೇಟಿಂಗ್ ನಲ್ಲಿ ಒಬ್ಬ ಫ್ರಾಂಕ್ ಎಂಬುವ ಗೆಳೆಯನಾದ. ನನ್ನ ತಪ್ಪಿನಿಂದ ಅಚಾತುರ್ಯದಿಂದ ಅವನಿಗೆ NGO ಸ್ಟಾರ್ಟ್ ಮಾಡಲೆಂದು ಅವನಿಗೆ ೧ ಲಕ್ಷ ಹಾಕಿಬಿಟ್ಟೆ ಆಮೇಲೆ ಗೊತ್ತಾಯ್ತು ಅದು ಫ್ರಾಡ್ ಎಂದು ಮನಸು ತುಂಬಾ  ಬೇಸರ ಆಯ್ತು. ಅದು ನಾಗರಾಜ ನಿಗೆ ಗೊತ್ತಾಗಿ ನನ್ನ ಮೇಲೆ ತುಂಬಾ ಕೋಪ ಮಾಡಿಕೊಂಡ. ತಪ್ಪಾಯ್ತು ಎಂದು ಇನ್ಮೇಲೆ ಡೇಟಿಂಗ್ ಆಪ್ ಯೂಸ್ ಮಾಡಲ್ಲ ಅಂತ ಪ್ರಮಾಣ ಮಾಡಿ ಬಿಟ್ಟು ಬಿಟ್ಟೆ. ಸ್ವಲ್ಪ ದಿನಗಳ ನಂತರ ನಾಗರಾಜನ ನಿಜ ಬಣ್ಣಗಳು ಬಯಲಾಗತೊಡಗಿದವು. ನಾನು ಬಿಟ್ಟ blued ಆಪ್ ಅನ್ನು ಅವನು ಯೂಸ್ ಮಾಡ್ತಿದ್ದ. ಒಂದೆರಡು ಸಲ ಬುದ್ಧಿ ಹೇಳಿ ಡಿಲೀಟ್ ಮಾಡಿದ್ದೆ. ಸುಮ್ನೆ ಚಾಟ್ ಮಾಡ್ತೀನಿ, ಚಾಟ್ ಮಾಡೋದು ಕ್ರೇಜ್ ಅಂತ ಹೇಳಿದ್ದ. ಸರಿ ನನ್ನಿಂದ ಅವನಿಗೆ ಸುಖ ಸಿಗದೇ ಇದ್ದದ್ದು ಚಾಟ್ ನಲ್ಲಿ ಸಿಗುತ್ತೇನೋ ಅಂತ ಸುಮ್ಮನಾದೆ. ಬರುತ್ತಾ ಬರುತ್ತಾ ಅದು ಅತಿರೇಕ ಆಗ್ತಿದೆ ಅಂತ ನನಗೆ ಅನಿಸ್ತಾ ಇತ್ತು. ಬೆಂಗಳೂರಿಗೆ ಬಂದಾಗೆಲ್ಲ ಆ ಮೊಬೈಲ್ ನಲ್ಲೆ ಮುಳುಗಿರುತ್ತಿದ್ದ. ನನಗೆ ಮಲ್ಲೇಶ್ವರದ ಮನೆ ಬಾಡಿಗೆ ಹೆವಿ ಅನಿಸ್ತು ಅದಕ್ಕೆ ಕೋವಿಡ್ ಮುಗಿದ ತಕ್ಷಣ ನನಗೆ ಅಗತ್ಯವಾಗಿ ಬೇಕಾಗಿದ್ದ ಸಾಮಾನೆಲ್ಲ ಇಟ್ಟುಕೊಂಡು ಮಿಕ್ಕಿದ್ದ ಗೃಹವಸ್ತುಗಳನ್ನ ನಂಜನಗೂಡಿಗೆ ಸಾಗ ಹಾಕಿದೆ. ಅದರಲ್ಲಿ ಅಮ್ಮನ ನೆನಪಾಗಿದ್ದ ಸೋಫಾ, ಮಂಚ, ಹಾಸಿಗೆಗಳು ವಾಕ್ಕ್ಯುಮ್ ಕ್ಲೀನರ್, ಏರ್ ಕೂಲರ್ ಇನ್ನಿತರ ಬೆಲೆ ಬಾಳುವ ವಸ್ತುಗಳೇ ತುಂಬಿದ್ದವು. ಮನೆ ಖಾಲಿ ಮಾಡುವ ದಿನದಂದೇ ಯತಿ - ಅಕ್ಕನ ಮಗನ ಕರಕೊಂಡು "ಸಮಾಧಾನ" ಆಪ್ತ ಸಮಾಲೋಚನೆ ಕೇಂದ್ರಕ್ಕೆ ಬನ್ನೇರುಘಟ್ಟ ಹತ್ತಿರ ಇರುವಲ್ಲಿ ಕರಕೊಂಡು ಹೋಗಿ ಬಂದೆ. ಖಾಲಿ ಮಾಡುವ ಸಮಯದಲ್ಲಿ ಯತಿ ತಾನು ಊರಿಗೆ ಹೋಗ್ತೀನಿ ಅಂತ ಕೈ ಕೊಟ್ಟು ಹೋದ.

ನಾನು ಮಲ್ಲೇಶ್ವರದಿಂದ ವಿಲ್ಸನ ಗಾರ್ಡನ್ ಕಡೆ ಮನೆ ಮಾಡಿದೆ. ಅಲ್ಲಿಗೆಸಮಾಧಾನ ಕೇಂದ್ರಕ್ಕೆ ಹೋಗಬೇಕೆಂದು ಯತಿ &ನಾಗರಾಜ್ ಬಂದಿದ್ದರು. ಅಂದು ಯತಿ ಬೆಳಿಗ್ಗೆನೇ ವಾಂತಿ ಮಾಡಿಕೊಳ್ಳಲು ಶುರು ಮಾಡಿಕೊಂಡಾಗ ಕಂಡುಬಂದದ್ದು ಅವನಿಗೆ ಕಿಡ್ನಿ ಕಲ್ಲಿದೆಯಂದು. ನಾನು ಆಫೀಸ್ ಗೆ ರಜೆ ಹಾಕಿ ಅವನಿಗೆ ಹತ್ತಿರದ ಆಸ್ಪತ್ರೆಯಲ್ಲಿ ತೋರಿಸಿ ಮತ್ತೆ "ಬೆಂಗಳೂರು ಕಿಡ್ನಿ ಫೌಂಡೇಶನ್" ಗೆ ಕರ್ಕೊಂಡು ಹೋಗಿ ನನ್ನ ದುಡ್ಡಿನಲ್ಲಿ ಅವನಿಗೆ ಚೆಕ್ ಅಪ್ ಮತ್ತು ಔಷಧಿ ಮಾಡಿಸಿದೆ. ನಂತರ ನಾಗರಾಜನಿಗೆ ಯೂರಿನ್ ಇನ್ಫೆಕ್ಷನ್ ಅಂತ ಒದ್ದಾಡ್ತಾ ಇದ್ದ ಅವನಿಗೂ ಅಲ್ಲೇ ಚೆಕ್ ಅಪ್ ಮಾಡಿಸಿದೆ. ನಂತರದ ದಿನಗಳಲ್ಲಿ ಅವ್ನಿಗೆ ಡಯಾಬಿಟಿಸ್ ಜಾಸ್ತಿಯಾಗಿತ್ತು, ಆಗ ವಿಲ್ಸನ್ ಗಾರ್ಡರ್ನ ನಲ್ಲಿರುವ ಅಗಡಿ ಹಾಸ್ಪಿಟಲ್ ನಲ್ಲಿ ೬೦೦ ರೂಪಾಯಿ ಕೊಟ್ಟು ಚೆಕ್ ಮಾಡಿಸಿದೆ. ಅದರಲ್ಲಿ ಸಮಾಧಾನ ಆಗಲಿಲ್ಲವೆಂದು ಮಲ್ಲೇಶ್ವರದ Metropolis Lab ನಲ್ಲಿ ಕಂಪ್ಲೀಟ್ ಚೆಕ್ ಮಾಡಿಸಿ ಏನು ಅಂತ ತೊಂದರೆ ಇಲ್ಲ ಅಂತ ತಿಳಿದು ಬಂತು. ಅಲ್ಲಿಯೂ ಸಹ ನಾನೇ ೩೦೦೦ ರೂಪಾಯಿ ಕೊಟ್ಟೆ ಯಾಕೆ ಅವನ ಮೇಲೀನ ಪ್ರೀತಿಯಿಂದ ಅಲ್ಲ ಕುರುಡು ಪ್ರೀತಿಯಿಂದ...  

ನಂತರದ ದಿನಗಳಲ್ಲಿ ಅವನಲ್ಲಿ ಏನೋ ಬದಲಾವಣೆಗಳು ಕಂಡುಬಂದವು.  ಮಾತು, ನಡತೆ ಎಲ್ಲವೂ  ನಿಧಾನಕ್ಕೆ ಗೊತ್ತಾಗಿದ್ದು ಅವನು Blued ಡೇಟಿಂಗ್ ಆಪ್ ಪುನಃ ಯೂಸ್ ಮಾಡ್ತಾ ಇದ್ದಾನೆ ಅಂತ . ಅರಳಿ ಅವನಿಗೂ ಆಸೆಗಳಿವೆ ಅಂತಾ ಸುಮ್ಮನಾದೆ. ಅವನು ಒಮ್ಮೆ ಮನೆಗೆ ಬಂದಾಗ ರಾತ್ರಿ ಸುಮಾರು ೧೧ ಗಂಟೆ ಸುಮಾರಿಗೆ ಫೋನ್ ನಲ್ಲಿ ಮಾತಾಡುತ್ತಾ ಇದ್ದ ಯಾರೂ ಅಂತ ಕೇಳಿದ್ದಕ್ಕೆ ಅವನು ಫ್ರೆಂಡ್ ಹಾಗೆ ಹೀಗೆ ಯಾಮಾರಿಸಿದ. ಆದರೆ ನನಗೆ ಗೊತ್ತಾಗಿತ್ತು ಅವನು ಯಾವನೋ ಗೇ ಫ್ರೆಂಡ್ ಅಂತ. ಕ್ರಮೇಣ ಅದು ಅತಿರೇಕವಾಯಿತು. ಆಗ ಅಂದೆ ನನ್ನ ಬೆಡ್ ಮೇಲೆ ಇದ್ದುಕೊಂಡು ನನ್ನ ಊಟ ಮಾಡಿಕೊಂಡು ಬೇರೆ ಯಾವನೋ ಜೊತೆಲೋ ಚಾಟ್, ಮಾತಾಡೋದು ಯಾಕೆ ಅಂತ ಕೇಳಿದೆ. ಅದಕ್ಕವನು ಸುಮ್ಮನೆ ಕ್ರೇಜ್ ನನಗೆ, ಅವನು ಒಳ್ಳೆಯ ಫ್ರೆಂಡ್ ಅಷ್ಟೇ ಹಾಗೆ ಹೀಗೆ ಅಂತ ಕಥೆ ಹೇಳಿದ. ಏನೋ ಮಾಡ್ಕೊಂಡು ಸಾಯಿ. ಅಂತ ಬಿಟ್ಟೆ. ಮುಂದೆ ನನಗೆ ಆಫೀಸ್ ಕೆಲಸ ಜಾಸ್ತಿ ಇತ್ತು. 

2020, november 7 ದೀಪಾವಳಿಯ ಸಮಯ. ನನ್ನನ್ನ ನಾಗರಾಜ್ ಊರಿಗೆ ಬಾ ರಜೆ ಇದೆಯಲ್ಲ ಅಂತ ಕರೆದ . ಅಂದು ಸಂಜೆ "ರೋಷನ್ ಅನ್ನೋನು ಬರ್ತಾನೆ, ಹೊನ್ನಾವರದಿಂದ" ಅಂತ ಅಂದ.  ನನಗೆ ಅನುಮಾನ ಬಂದಿತು. ಎಂದೂ ಇಲ್ಲದವಾ ಅವನನ್ನ ಯಾಕೆ ಕರೀತಾನೆ. ಇರಲಿ ಬಂದ ಮೇಲೆ ನೋಡುವ ಅಂತ ಸುಮ್ಮನಾದೆ. ರೋಷನ್ ಬಂದ ಅವನು ಸ್ವಲ್ಪ ವಾಚಾಳಿ ಅಂತ ತಿಳೀತು. ಮರುದಿನ ನನಗೆ ಆಫೀಸ್ ನ ಜೂಮ್ ಮೀಟಿಂಗ್ ಕಾಲ್ ಇತ್ತು. ಕರೆಂಟ್ ಬೇರೆ ಇರಲಿಲ್ಲ, ನಾನು ರೂಮ್ನಲ್ಲಿ ಕುಳಿತು ನನ್ನ ಮೊಬೈಲ್ ನೋಡುತ್ತಿದ್ದೆ. ಅವರಿಬ್ಬರೂ ಹೊರಗೆ ಹಾಲ್ ನಲ್ಲಿ ಕುಳಿತ್ತಿದ್ದರು.   ನಾಗರಾಜ್ ತನ್ನ ಮೊಬೈಲ್ ಅನ್ನು ಟೇಬಲ್ ಮೇಲೆ ಮೊಬೈಲ್  ಲಾಕ್ ಮಾಡದೇ ಹೋಗಿದ್ದ, ನನಗೂ ಕುತೂಹಲ ತಡೆಯದೆ ಅವನ ಮೊಬೈಲ್ ನೋಡಿದೆ ಅದರಲ್ಲಿ ಅವನು ರೋಷನ್ ನ್ ಮೇಲೆ ಅದೂ ಅವನ ಎದೆಯ ಮೇಲೆ ನಾಗರಾಜ್ ಫೋಟೋ ಹಾಕಿ ಕೊಲಾಜ್ ಮಾಡಿ ರೋಷನ್ ಗೆ ವಾಟ್ಸಪ್ಪ್ ಮೆಸೇಜ್ ಮಾಡಿದ್ದಾನೆ ನಂಗೆ ತುಂಬಾ ಬೇಸರ ದುಃಖ ಕೋಪ ಎಲ್ಲವು ಬಂದಿತು. ಮತ್ತೆ ನಾಗರಾಜ್ ಗೆ ಅದನ್ನೇ ಮೆಸೇಜ್ ಮಾಡಿದೆ. ಏನಿದೆಲ್ಲ ಅಂದೆ. ಅವನು ಕೋಪದಿಂದ ನಿನಗೆ ನನ್ನ ಮೊಬೈಲ್ ಯಾರು ನೋಡೋಕೆ ಹೇಳಿದ್ದು ಅಂತ ಆ ಪೋಟಿಗಳನ್ನೆಲ್ಲ ಡಿಲೀಟ್ ಮಾಡಿಸಿಬಿಟ್ಟ. ಆದರು ಆ ಫೋಟೋಗಳು ಡೌನ್ಲೋಡ್ ಆಗಿದ್ದವು. ಅದನ್ನು ನೋಡುತ್ತಾ ಕಣ್ಣಲ್ಲಿ ನೀರು, ರಕ್ತವೇ ಬಂದಿತು ಅನ್ನಬಹುದು. ನಾನು ಅವತ್ತು ಕಾಲ್ ಇಲ್ಲದಿದ್ದರೆ ಆಗಲೇ ಹೊರಟು ಬೆಂಗಳೂರಿನ ಹಾದಿ ಹಿಡಿಯುತ್ತಿದ್ದೆ. ಕರೆಂಟ್ ಬರೋದು ಲೇಟ್ ಆಗುತ್ತೆ ಅಂತ ತಿಳಿಯಿತು, ಬೇಸರದಿಂದ ಹೊರಗೆ ಹೊರಟುಬಿಟ್ಟೆ.. ಸ್ವಲ್ಪ ದೂರದಲ್ಲಿ ಹಿಂದೆ ರೋಷನ್ ಬೈಕ್ ನಲ್ಲಿ ಬಂದ . ಕೂತ್ಕೊಳ್ಳಿ ಮಾತಾಡಬೇಕು ಅಂತ ಸ್ವಲ್ಪ ದೂರ ಕರೆದುಕೊಂಡು ಹೋಗಿ "ನಿನಗೂ, ನಾಗರಾಜ್ ಗೆ ಏನಾಗಬೇಕು ಅಂತ ಕೇಳಿದ. ನಾನು ನಿಜವನ್ನೇ ಹೇಳಿದೆ. ಹೌದು ನಾವಿಬ್ಬರೂ ಇಷ್ಟ ಪತ್ತಿದ್ದ್ದೆವು, ನಾನು ಅವನಿಗೋಸ್ಕರ ಏನೆಲ್ಲಾ ಮಾಡಿದ್ದೀನಿ, ಅದೆಲ್ಲ ಬಿಟ್ಟು ಅವನು ನಿನ್ನ ಜೊತೆ ಈ ರೀತಿಯೆಲ್ಲಾ ಮಾಡಿದ್ದಾನೆ ಅಂತ ಅಳುವೇ ಬಂದಂತೆ ಆಯ್ತು. ರೋಷನ್ ನನಗೂ ಅವನಿಗೂ ಏನು ಸಂಬಂಧವಿಲ್ಲ ನನ್ನಿಂದ ನಿಮ್ಮ ರಿಲೇಷನ್ಸ್ ಏನೂ ತೊಂದರೆ ಆಗಲ್ಲ ಬನ್ನಿ ಅಂತ ಕರೆದುಕೊಂಡು ಬಂದ. ನನಗೂ ಸಮಾಧಾನವಿರಲಿಲ್ಲ, ಬಂದಮೇಲೆ ನಾಗರಾಜ್ ಗೆ ಕೇಳಿದೆ ಯಾರು ಏನಾಗಬೇಕು ಅವನು ಹೇಳು. ಇಷ್ಟೆಲ್ಲ ಲಕ್ಷ ಲಕ್ಷ ಹಾಕಿ ನಮ್ಮ ಮನೆ ಅಂತ  ಮಾಡಿದ್ದೂ ಇದಕ್ಕೇನಾ ? ಅಂದೇ . ಹೌದು ನಿನ್ನ ಮನೆ ನೀನು ಏನಾದ್ರು ಮಾಡ್ಕೋ, ಬಂದಾದ್ರು ಇರು ಏನಾದ್ರೂ ಮಾಡ್ಕೋ, ಅಂದ. ಅದಕ್ಕೆ ಮನೆ ನನ್ನ ಹೆಸರಿಗೆ ಮಾಡಿಕೊಡು ಅಂದೆ . ನೀನು ದುಡ್ಡು ಕೊಟ್ಟಿದ್ದೀಯ ಅನ್ನೋದಿಕ್ಕೆ ಏನು ಸಾಕ್ಷಿ ಇದೆ ಏನೂ ಇಲ್ಲ, ನೀನು ಕೊಟ್ಟೆ ಇಲ್ಲ ಅಂಟ್ ಅಂದುಬಿಟ್ಟ. ಅದಕ್ಕೆ ನಾನು ಲೋಫರ್ ಇಂತ ಮೋಸ ಮಾಡ್ತಿಯಾ ಅಂತ ತಿಳಿದಿರಲಿಲ್ಲ ಅಂದೇ. ಅದಕ್ಕೆ ನನ್ನ ಮೂಗಿಗೆ ಗುದ್ದಿದ. ತುಂಬಾ ನೋವಾಯಿತು. ಅಂದೆಲ್ಲ ಮಾತನಾಡದೇ ಇದ್ದೆ. ಸಂಜೆ ರೋಷನ್ ಒಬ್ಬನೇ ಸಿಕ್ಕಿದ, ಮಹಡಿಯ ಮೇಲೆ ಎಲ್ಲ ವಿಷ್ಯವನ್ನು ಹೇಳಿದೆ, ಹಿಂದೆ ನಾಗರಾಜ್ ಸಹ ಬಂದ , ಅವನ ಜೊತೆಗೂ ಜಗಳ ಆಡಿದೆ. ಮಾರನೆಯ ದಿನ ೩ ಜನವೂ ಒಟ್ಟಿಗೆ ನನ್ನ ಮನೆಗೆ ಬೆಂಗಳೂರಿಗೆ  ಬಂದರು. ಇಬ್ಬರೂ ಇಂಟರ್ವ್ಯೂ ಮಾಡಿದರು ಇಬ್ಬರಿಗೂ ಕೆಲಸ ಸಿಕ್ಕಿತು. ಸಂಜೆ ರೋಷನ್ ನನ್ನ ಕರೆದು "ನೀವು ಅವನ ಜೊತೆ ಯಾವ ಭರವಸೆ ಮೇಲೆ ಇಷ್ಟೆಲ್ಲಾ ಮಾಡಿದಿರಿ, ಸೆಕ್ಸ್ ಇದ್ದರೇನೇ ಇವೆಲ್ಲ ಒಂದು ಅರ್ಥ" ಅಂತ ಹೇಳಿದ, ಅದೆಲ್ಲ ನಮಗೆ ಅವೇಲ ನಗಣ್ಯ ಅದಕ್ಕೆ ಎಲ್ಲ ಸಹಾಯ ಮಾಡಿದ್ದೂ ಆದರೆ ಅವನು ಈ ರೀತಿ ಮಾಡ್ತಾನೆ ಅಂತ ತಿಳಿದಿರಲಿಲ್ಲ. ಎಂದೇ ಅಂತೇ ಅವರಿಬ್ಬರೂ ಮಾರನೆಯ ದಿನ ಹೊರಟು ಹೋದರು. 






ಇದಾದಮೇಲೆ ಹಲವಾರು ಭಾರಿ ನನಗೂ ನಾಗರಾಜಗೂ ಜಗಳಗಳು ನಡೀತಾ  ಇತ್ತು. ಈ ಮಧ್ಯೆ ಯತಿ ಯಾ ಮಾನಸಿಕ ವಿಕಲತೆಯಿಂದ ಅವನಿಗೊಂದು MNC ಕಂಪನಿ ಯಲ್ಲಿ ಕೆಲಸ ಕೊಡಿಸಿದೆ. ಸುಮ್ಮರ್ ಈಗ ಅವನಿಗೆ ೪೦ ಸಾವಿರ ಸಂಬಳ ಬರುತ್ತದೆ. ಅವನನ್ನು ನನ್ನ ಮನೆಯಲ್ಲಿಯೇ ಇರಿಸಲುರ್ಪಯತ್ನ ಮಾಡಿದ್ದ . ನನಗೆ ನನ್ನದೇ ಆದ ಪ್ರೈವಸಿ ಇದೆ, ಅವನು ಮನೆಯಲ್ಲಿದ್ದಾರೆ ಒಂದೇ ಒಂದು ಕೆಲಸ ಮಾಡುತ್ತಿರಲಿಲ್ಲ, ಬೆಳಿಗ್ಗೆ ಏಳೋದು ಸ್ನಾನ ಮಾಡೋದು ಹೋಗೋದು ಸಂಜೆ ಬರೋದು  ಮಲಗೋದು,ಜೊತೆ ರಾತ್ರಿಯೆಲ್ಲ ಗೊರಕೆ ಹೊಡೆಯೋದು.. ನನಗೆ ಅವನು ಬಂದ  ಅಂದ್ರೆ ನಿದ್ರೆ ಇರುತ ಇರಲಿಲ್ಲ. ಸುಮಾರು ಸಲ ಹೇಳಿ ಹೇಳಿ PG  ಮಾಡಿಸಿ ಅವನನ್ನು  ಇರಿಸಿದ್ದಾನೆ. ಆ PG ನೋಡಲೋಸುಗ ಪ್ರತಿವಾರ ನನ್ನ ಮನೆಯಲ್ಲಿ ಇದ್ದು ತಿಂದು ಉಂಡು ಮಲಗಿ ಬಿಸಿ ಬಿಸಿ ಸ್ನಾನ ಮಾಡಿ  ಇಬ್ಬರೂ.  

ನಂತರದ ದಿನಗಳಲ್ಲಿ ನನಗೂ ಅವನ ಸುಳ್ಳು ಪೊಳ್ಳು  ಭರವಸೆಗಳನ್ನ ಕೇಳಿ  ಸಾಕಾಗಿತ್ತು. ಒಮ್ಮೆ ಜಗಳ ಆಡುತ್ತ ನಿನ್ನ ನಂಬಿ ಬಂದಿದ್ದಕ್ಕೆ ನನ್ನ ಜೀವನ ಹಾಳು ಮಾಡಿಬಿಟ್ಟೆ ಅಂದೇ, ಅದಕ್ಕೆ ನಾಗರಾಜ್ (ಫೇಕ್ ರಾಜ್ ) "ನಿನ್ನ  ಸೂಳೆಗಾರಿಕೆ ಮಾಡ್ಲಿಕ್ಕೆ ಬಿಟ್ಟು ಹಾಳು ಮಾಡಿದ್ದೀನಿ " ಅಂತ ಅಂದುಬಿಟ್ಟ. ಆವತ್ತಿಂದ ಅವನ ಮೇಲೆ ಹೇಸಿಗೆ ರೇಜಿಗೆ ಹುಟ್ಟಿದೆ. 

ಕಳೆದ ಜನವರಿ ಲಿ ದುಡ್ಡು ಕೊಡು ಮೇಲೆ ಮನೆ ಕಟ್ಟಿಸಬೇಕು ಹಾಗೆ ಹೀಗೆ ಅಂದ. ನಾನು ಕೊಡಲ್ಲ ಅಂದೇ, ಅದಕ್ಕೆ ಆ ಮನೇನ ನಿನ್ನ ಹೆಸರಿಗೆ ಮಾಡಿಕೊಂಡು, ಅಕ್ಕನಿಗೆ ಏನು ಕೊಡಬೇಕೋ ಕೊಡು " ಅಂದ. ಅದಕ್ಕೆ ನಾನು "ನಾನು ಮಾಡಿರೋ ಸಹಾಯಕ್ಕೆ ನೀನೆ ಫ್ರೀ  ಯಾಗಿ ಮಾಡಿಸಿಕೊಡಬೇಕು " ಅಂದೇ. ಅದಕ್ಕೆ "ನಿನ್ನ ಬುದ್ಧಿ ಈಗ ಗೊತ್ತಾಯ್ತು   ನಿನಗೆ ದುಡ್ಡಿನ ಭೂತ ಹಿಡಿದಿದೆ." ಅಂದ. ನಾನು ಈಗ ದುಡ್ಡು ಕೊಟ್ಟು ಕೊಟ್ಟು ಖಾಲಿ ಕೈ ಆಗಿದ್ದೀನಿ, ಬೀದೀಲಿ ನಿಲ್ಲೋ ಪರಿಸ್ಥಿತಿ ಗೆ ಬಂದಿದ್ದೀನಿ. ಇನ್ನು ಮೇಲೆ ಈ ರೀತಿ ಜಗಳ, ದುಡ್ಡಿಗೆ ನನ್ನ ಮನೆಗೆ ಬಾರೋ ಹಾಗಿದ್ರೆ ಬರಬೇಡ ಅಂದೆ. ಅಂದಿನಿಂದ ಇದುವರೆಗೂ ಕಾಲ್ ಮೆಸೇಜ್ ಮಾಡಿಲ್ಲ.

ಜೊತೆ ಕಳೆದ ವರ್ಷ ಸೈಟ್ ಒಂದನ್ನು ನನ್ನ ದುಡ್ಡಿನಿಂದ ತೆಗೆದುಕೊಂಡ. ಅವನು ಅಲ್ಲದೇ ಅವನ ಫ್ರೆಂಡ್ ಗೋಪಾಲ್ ನಿಗೂ ದುಡ್ಡು ಕೊಡಿಸಿದ. ಅವನಿಗೂ ೫ / ೬ ಲಕ್ಷ ಮೋಸ ಮಾಡಿದ್ದಾನೆ. ಯಾವುದೊ ಹುಡುಗಿ ತೋರಿಸ್ತೀನಿ ಮದುವೆ ಆಗು ಅಂತ ಸುಳ್ಳು ಹೇಳಿ ಮೋಸ ಮಾಡಿದ್ದಾನೆ.

ಪ್ರತಿಯೊಂದಕ್ಕೂ ಚುಚ್ಚು ಮಾತು, ನಾಟಕ ಆಡ್ತೀಯ, ಸುಳ್ಳು ಹೇಳ್ತಿಯ ಅಂತಾನೆ, ತಾನೇ ಸುಳ್ಳು, ಸುಳ್ಳಿನ ಮೇಲೆ ಮತ್ತೊಂದು ಹಲವು ಸುಳ್ಳು,  ಹೇಳಿ ಹೇಳಿ ನಮ್ಮನ್ನೆಲ್ಲ ಮೋಸಮಾಡಿ ಮನೆ ಕಟ್ಟಿಸಿಕೊಂಡು ಈಗ ಹಾಯಾಗಿದ್ದಾನೆ.  ಅವನು ಚಾಮರಾಜ ನಗರ, ಗದಗ್, ಗೋಕಾಕ್ ಮೈಸೂರು ಎಲ್ಲ ಕಡೆ ಸುಳ್ಳು ಹೇಳಿಯೇ ಕೆಲಸ ಗಿಟ್ಟಿಸಿಕೊಂಡಿರೋದು.

ಹೀಗೊಂದು ವಾಟ್ಸಪ್ಪ್ ಚಾಟ್ ಹಿಸ್ಟರಿ


2/22/21, 09:11 - h 

2/22/21, 09:14 - e 

2/22/21, 09:19 - Demo ಇಲ್ಲ ಮಾಡಿಸೋದೇ ಇಲ್ಲ ಅಂತಾದರೂ ಹೇಳು..

2/22/21, 09:26 - antiya..

2/22/21, 09:50 - Demo Feku: Houdu

2/22/21, 09:50 - Girish: Are u mad 😡😡

2/22/21, 09:52 - 

 

ನಾನು ನಿನ್ನ ನಂಬಿ ಬಂದಿದ್ದು, ನಿನ್ನ ಜೊತೆ ಇದ್ದರೆ, ಮಾನಸಿಕವಾಗಿ ಧೈರ್ಯ ಸ್ಥೈರ್ಯ ವೃಧ್ಹಿಯಾಗಯುತ್ತೇನೋ 

ನನಗೊಂದು ಆಸರೆ ಆಗುತ್ತೆ ಅಂತ. ಆದರೆ ನೀನು ಹೀಗೆ ನನ್ನ ಹೀಯಾಳಿಸುತ್ತ, ಭಾವನೆಗಳಿಗೆ ಬೆಲೆ ಕೊಡದೆ

ನನ್ನ ಆತ್ಮ ಸ್ಥೈರ್ಯ ಕುಗ್ಗಿಸಿ ಒಂದು ರೀತಿಯ ಮನೋ ಹಿಂಸೆ ಕೊಡ್ತಿದ್ದೀಯ, ಕೊಟ್ಟಿದಿಯ

ಇನ್ನು ನನಗೆ ಆಗಲ್ಲ ಅದನ್ನೆಲ್ಲ ತಡೆಯೋಕೆ. ಒತ್ತಡ, ಹಿಂಸೆ ತಡೆದು ಮತ್ತೆ ಪುಟಿದೇಳುವ ಶಕ್ತಿ ನನಗಿಲ್ಲ

ನಿನ್ನಿಂದ ನನಗೆ ಮುಂದೆ ತೊಂದರೆ  ಇಲ್ಲ ನನ್ನಿಂದ ನಿನಗೆ ತೊಂದರೆ ಆಗೇ ಆಗುತ್ತೆ

ಇದು ಸಾಯೋವರೆಗೂ ಇರಲಾರದ  ಸಂಬಂಧ. ಅದರಿಂದ ಎಲ್ಲರಿಗೂ ತೊಂದರೆ ನೇ

ನನಗೆ ನಾನು ನನ್ನವನು ಜೊತೆಯಾಗಿ ಚೆನ್ನಾಗಿರಬೇಕು ಅಂತ ಆಸೆ ಇತ್ತು

ಆದರೆ ನೀನೆ ನನಗೆ ಭಾವನೆಗಳಿಗೆ ಬೆಲೆ ಕೊಡದೆ ಇದ್ದಾಗ ಅಲ್ಲಿ ನಾನು ಇರಲಿಕ್ಕೆ ಆಗಲ್ಲ

ಆದ್ದರಿಂದ ಆದಷ್ಟೂ ಬೇಗ ಸೆಟ್ಲ್ ಮಾಡು.. ಆಗಲ್ಲ ಅಂತ ಹೇಳು ಬಿಟ್ಟು ಬಿಡ್ತೀನಿ 

ಯಾವತ್ತೂ ನಿನ್ನ ಸನಿಹಕ್ಕೂ ಬರಲ್ಲ.

ನೀನು ಸುಂದರ ನಿನಗೆ ಹುಡುಗ ನೋ ಹುಡುಗಿನೋ ಯಾರಾದರೂ ಸಿಕ್ತಾರೆ.

 ನಾನು ಒಂಟಿಯಾಗಿ ಇರೋದೇ ವಾಸಿ. ನಿನ್ನ ಜತೆಯಲ್ಲಿದ್ದೂ ಒಂಟಿಯಾಗಿ ಇರೋ ಹಿಂಸೆ ಗಿಂತ

ನಿನ್ನ ಜೊತೆ ಇಲ್ಲದೆ ಒಂಟಿಯಾಗಿ ಹಾಯಾಗಿರೋದೇ ವಾಸಿ ಅಂತ ತೀರ್ಮಾನಕ್ಕೆ ಬಂದಿದ್ದೇನೆ. ಇದರ ಮೇಲೆ ನಿನ್ನಿಷ್ಟ . ನಾನು ಒಂಟಿಯಾಗಿರೋದ್ದನ್ನ ಬಯಸ್ತೀನಿ.  ನಿನ್ನ ಸುಳ್ಳು ಭರವಸೆಗಳ ಮೇಲೆ ನನ್ನ ಜೀವನ ನಡೆಯೋಲ್ಲ .. ಥ್ಯಾಂಕ್ಸ್

 

ನನ್ನಿಂದ ಬೇರೇನೂ ಸಹಾಯ ಬಯಸಬೇಡ

2/22:07 - 


ಕುರುಡು ಪ್ರೀತಿಯಿಂದ..

ಕುರುಡು ಪ್ರೀತಿಯಿಂದ..   ಹೇಗೆ ಬರೆಯಲಿ ಈ ವಿಷಯವನ್ನು ಅಂತ ಅನಿಸುತ್ತಲೇ ಯಾಕೋ ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಅದು ನಾನು ಮಾಡಿದ ತಪ್ಪೋ, ಅವನು ಮಾಡಿದ ತಪ್ಪೋ ಅಥವಾ...