Sunday, July 4, 2010

ಈ ಸಂಜೆ ಯಾಕಾಗಿದೆ...?


" ಈ ಸಂಜೆ ಯಾಕಾಗಿದೆ......?" FM ನಲ್ಲಿ ಕೇಳಿಬರುವಾಗ ನಾನು ಅವನ ರೂಂನಿಂದ ಬಂದು ಸಾಕಷ್ಟು ಸಮಯವಾಗಿತ್ತು. ಕಾಫಿ ಕುಡಿವ ಸಲುವಾಗಿ ಅಲ್ಲೇ ಇದ್ದ ಕಾಫಿ ಬಾರ್ ಗೆ ಹೋಗಿ ನಿಂತು ಸಿಗರೆಟ್ ಗೆ ಕೈ ಹಚ್ಚಿದಾಗ ಪಕ್ಕದಲ್ಲಿ ಚಪ್ಪಾಳೆ ಸದ್ದು.
"ಕೊಡು, ದಿನಾ ಹೀಗೆ ಮಾಡ್ತಿಯಾ, ಇಲ್ಲಿ ನೋಡು ಬರ್ತಿಯಾ " ಎಂದು ಗಂಡು ಧ್ವನಿಯ ಹೆಣ್ಣು ಮುಖದವ ಕೇಳಿದಾಗ.. ಎಲ್ಲೋ ಒಂದು ಸುಳಿಮಿಂಚು ಮನದಾಳದೊಳಗೆ ಇಳಿಯಿತು. ಮೈಯೆಲ್ಲಾ ಕರೆಂಟ್ ಹೊಡೆದ ಹಾಗೆ..ನಾಚಿಕೆ, ಸಂಕೋಚ, ಅಳುಕು ಅಲ್ಲ ಒಮ್ಮೆಗೆ.... ಅಲ್ಲಿಂದ ಕಾಲ್ತೆಗೆದು BEL ಸರ್ಕಲ್ ಬರುವ ಹೊತ್ತಿಗೆ ಅಲ್ಲೆಲ್ಲೇ ನಿಂತಿದ್ದ 'ಮಂಗಳ ಮುಖಿಗಳು' ಹಣಕ್ಕಾಗಿ ಅವರಿವರನ್ನು ಕಾಡಿಸುತ್ತಿದ್ದರು.
ಇನ್ನು ತುಂಬಾ ಕ್ರಮಿಸಬೇಕಾಗಿದೆ. ದೇಹವೂ ಸ್ವಲ್ಪ ಆಯಾಸ ವಾದಂತೆ ಇತ್ತು. ಅಲ್ಲೇ ನೆನಪಾಯ್ತು BEL ಪಾರ್ಕನಲ್ಲಿ ಕುಳಿತು ಮುಂದೆ continue ಮಾಡೋಣ ಅಂತ. ಸುತ್ತ ಹಸಿರು ಗಿಡ ಪ್ರಶಾಂತ ಅಲ್ಲೊಮ್ಮೆ ಇಲ್ಲೊಮ್ಮೆ ಮಕ್ಕಳಾಟ, ಗೆಳೆಯರ ಗುಂಪು..

'ಇಲ್ಲೇ ಅಲ್ಲವೇ ಅವನನ್ನ meet ಮಾಡಿದ್ದು. ಎಷ್ಟೊಂದು ಸಲ chatting, sms, mails.. ಹಾ ಅವನೇ ನನ್ನ ಮೊದಲ GAY friend. ಎಷ್ಟು ವರ್ಷ ಆಗಿರಬೇಕು ಸುಮಾರು 4 ವರ್ಷ ಆಗಿರಬೇಕಲ್ಲ.. ಹೆಸರೇನು .... ಕಿಶೋರ್ ... ಕಿರಣ್.. ಶೌವಿಕ್ .. ನೆನಪೇ ಬಾರದು. ಹೌದು.. ರಘು . ಚೆಂದ ಇದ್ದ.. ಏನೇನೋ ಕೇಳಿದ ಆಗ ನಂಗೆ ಏನು ಅರ್ಥ ಆಗಿರಲಿಲ್ಲ. ನನ್ನ ಬುದ್ದು ಅಂದ. ಹೌದು ಬುದ್ಧನಾಗದ ಬುದ್ದು ನೆ ನಾನು. ಆಗ ಅವನೆಂದ 'ನಿನ್ನಲ್ಲಿ ನನಗೆ ಇಷ್ಟ ಇಲ್ಲ. ಮೊದಲು ಇದನ್ನೆಲ್ಲಾ ತಿಳ್ಕೋ. ಆಮೇಲೆ ನಿನಗೇ suit ಆಗುವವನು ಸಿಕ್ತಾನೆ' ಅಂತ ಹೇಳಿ ಹೋದ. ನೋಡುತ್ತಲೇ ಇದ್ದೆ ಅವನನ್ನ ನನಗೂ ಆಗ ಏನು ಅರ್ಥ ಆಗಿರಲಿಲ್ಲ ..
ಟೈಮ್ ಆಯ್ತು ರೂಂ ಕಡೆ ಹೋಗುವ ಎಂದು ಗಾಡಿ ಹತ್ತಿದೆ. ಮನದಲ್ಲಿ ಏನೋ ತಳಮಳ ... 'ಎಲ್ಲಿಗೆ ಪಯಣ... ಯಾವುದೊ ದಾರಿ..ಏಕಾಂಗಿ ಸಂಚಾರಿ..' ಎಂಬ ಹಾಡು ನೆನಪಾಯ್ತು.
ರೂಂ ನಲ್ಲಿ ಭರತ್. ರಂಜನ್, ರಾಜು, ಎಲ್ಲ TV ನೋಡ್ತಾ ಇದ್ದರು ನಾನು ಸುಮ್ಮನೆ ಹೋಗಿ ನನ್ನ ಜಾಗದಲ್ಲಿ ಬಿದ್ದುಕೊಂಡೆ. ಊಟ ಆಯ್ತು.. SMS ಆಗಲೇ ಬಂದಿತ್ತು.
ಮತ್ತದೆ ನೆನಪು.. ಅಂದು ರಘು ಕಳಿಸಿದ sms .. ನೀನು 'www.g.......com' ನಲ್ಲಿ log in ಆಗು ಸಿಕ್ತಾರೆ ನಿನಗೆ ಬೇಕಾದವರು... ಅಂತ.
ಕುತೂಹಲ ತಡೆಯಲಾರದೆ ಬೆಳಿಗ್ಗೆ ಎದ್ದು ಅವನು ಹೇಳಿದ ಸೈಟ್ ನಲ್ಲಿ register ಆದೆ. ಕೆಲ ದಿನಗಳ ನಂತರ ಒಂದೆರಡು ಮೆಸೇಜ್ ಗಳು ಬಂದವು. ಅದರಲ್ಲಿ 'ಕೃಷ್ಣ' ಅನ್ನುವನ profile ಮತ್ತು message ತುಂಬಾ ಹಿಡಿಸಿತು. ಮತ್ತದೆ sms, chat, 'ಸ್ವಲ್ಪ ನೀನು ಚೇಂಜ್ ಆಗ್ಬೇಕು ಅಂದ' ಆದೆ ಅವನಿಗೋಸ್ಕರ ಹಲವು ಬದಲಾವಣೆ, ಮಾತಾಡುವ ಶೈಲಿ ಎಲ್ಲ ಕಲಿಸಿ ಕೊಟ್ಟ. ಬರುತ್ತಾ ಬರುತ್ತಾ ಅವನಿಗೆ ನನ್ನ ಮೇಲೆ ಆಸಕ್ತಿ ಕಳೆದು ಕೊಳ್ಳ ತೊಡಗಿತೇನೋ ಅನಿಸ್ತು. ಭೇಟಿಯಾಗಲು ಕೇಳಿದೆ ಪ್ರತಿ ಭಾರಿ ಏನಾದರೊಂದು ಕಾರಣ ಹೇಳಿ ತಪ್ಪಿಸುತಿದ್ದ. ಅವನು ನನ್ನ ಜೀವನವನ್ನೇ ಬದಲು ಮಾಡಿದವ, ಅವನಿಗೆ ನನ್ನ ಜೀವನ ಕೊಡ್ಬೇಕು ಅಂತ ನಿರ್ಧರಿಸಿದ್ದೆ.. ಯಾಕೆ ಹೀಗೆ ಮಾಡ್ತಾ ಇದ್ದಾನೆ ಕೇಳುವ ಅಂತ ಅವನ birthday ನೆಪವೊಡ್ಡಿ ಅವನಿಗಿಷ್ಟದ ಶರ್ಟ್ gift ಕೊಟ್ಟ ದಿನವೂ ನನ್ನಿಂದ ದೂರ ಆದ. ಎಲ್ಲದಕ್ಕಿಂತ ಅವನ್ನ ತುಂಬಾ ಪ್ರೀತಿಸಿದ್ದೆ. ಇಷ್ಟ ಪಟ್ಟಿದ್ದೆ. ಸುಮಾರು ದಿನಗಳ ನಂತರ ತಿಳಿಯಿತು ಅವನು ನನ್ನ ಮನಸಲ್ಲ ನನ್ನ ದೇಹವನ್ನ ಇಷ್ಟ ಪಟ್ಟಿಲ್ಲ ಅಂತ... ನಿಧಾನ ಚೇತರಿಕೆ.
ಆಸೆಗಳ ಅರಸುವ ಆಸೆ . ಬಯಕೆಗಳ  ಪೂರೈಸುವಾಸೆ 
ನಂತರ .. ಆ ಪ್ರೊಫೈಲ್ ನ delete ಮಾಡಿ ಹೊಸದೊಂದು create ಮಾಡಿದೆ.
ಅಲ್ಲಿಂದ ಹಲವು ಬಗೆಯ ವಿಷಯಗಳು ತಿಳಿದವು. ಎಲ್ಲವೂ ಪ್ರೀತಿಯ ಸ್ನೇಹದ ಹೆಸರಲ್ಲಿ SEX ತನ್ನ ಪಾಡಿಗೆ ತಾನು ಹಗಲು ಇರುಳೆನ್ನದೆ ಬ್ರಾಹ್ಮಣ - ಶೂದ್ರ ನನ್ನದೇ ಹಿಂದೂ - ಮುಸ್ಲಿಂ - ಕ್ರಿಸ್ತಿಯನ್ ಅನ್ನದೆ ಸ್ವಚಂದವಾಗಿ ತನ್ನ ಪಾಡಿಗೆ ತಾನು ವಿಹರಿಸುತಿತ್ತು.
ಆಗೊಂದು ಮುಗಿಲ್ಲಲ್ಲೊಂದು ಮಿಂಚು. ಒಮ್ಮೆ ಅವನನ್ನ ಭೇಟಿ ಮಾಡುವ ಅಂತ. ಅವನಾರೋ ನಾ ತಿಳಿಯೆನು. ಆದರು ಭೇಟಿಯಾಗುವ ಅಂತ ಅಂದು ಅವನ ರೂಮಿನ ಕಡೆ ಹೊರಟೆ. ಮಳೆ ... ಸಣ್ಣಗೆ ಜಿಟಿ ಜಿಟಿ ಅನ್ನುತಿತ್ತು. ಅಲ್ಲೇ ಸಿಕ್ಕ. ನೋಡಿದೆವು, ಮಾತಾಡಿದೆವು ... "ಸರಿ ಈಗಲೇ .. ನನ್ನ ಬಯಕೆ ತೀರಿಸು" ಕರೆದ. ನನಗೆ ದೈಹಿಕ / ಮಾನಸಿಕ ಭಾವನೆಗಳು ಇಬ್ಬಂದಿಯಾಗಿ ತೊಳಲಾಡಿದವು. ನಂತರ ಕೇಳಿದೆ.. "ಸೆಕ್ಸ್ ನಂತರ ಮತ್ತೆ ಸಿಕ್ತಿಯಾ ?" ಅಂತ.. ಹ್ಞೂ ಅಂದ.. ದೇಹಗಳು ಒಂದಾದವು.. ಮನಸು ಮಾಡದೇ .. 
ನೆನಪಾಗದೇ ಕ್ಷಣಗಳು ದಿನಗಳು..
ನನ್ನ ದೇಹದ ಸವಿಯನ್ನ ಅನುಭವಿಸಿದ್ದ.. ಕಾಮವನ್ನು ಪ್ರೀತಿಯೆಂದು ಕೊಂಡೆ.. ನನ್ನನ್ನ
ನಾನೇ ಅವನಿಗೆ ಸಮರ್ಪಿಸಿಕೊಂಡೆ, ನನ್ನ ದೇಹದ ಇಂಚಿಂಚನ್ನು ಅನುಭವಿಸಿದ ಕಾಮದ ಹಸಿವು ತೀರಿದ ನಂತರ ಬೆನ್ನು ಮಾಡಿದ. ಮತ್ತೆ ಪ್ರೀತಿಗಾಗಿ ಅರಸುತ್ತಾ ಹೊರಟೆ ಆದರೆ ಬೇಕಾಗಿದ್ದು ಸಿಗಲಿಲ್ಲ. ಕನ್ನಡಿ ಮುಂದೆ ಬೆತ್ತಲೆಯಾಗಿ ನಿಂತರೆ ನನ್ನ ಮೇಲೆ ನನಗೆ ಅಸಹ್ಯ ವಾಗುತ್ತೆ ಯಾಕೆಂದರೆ ಅವನ ಕೈಗಳು ಈ ದೇಹದ ಮೇಲೆ ಹರಿದಿವೆ..

ಆಸೆಗಳೆಂದರೆ ಹೀಗೆ..
ಹಕ್ಕಿಯ ಹಾಗೆ..
ಅದುಮಿಟ್ಟರೆ ಕುಟುಕುವುದು...
ತೆರೆದಿಟ್ಟರೆ ಹಾರಿಹೋಗುವುದು...

ಕತ್ತಲ್ಲಲ್ಲೇ ಹುಟ್ಟಿ ಕತ್ತಲ್ಲಲ್ಲೇ ಕರಗಿ ಹೋಗುವಂತದು ಈ Gay Sex...
ಕೆಲವೊಮ್ಮೆ ದೇವರನ್ನ ಶಪಿಸಿ, ಅಪ್ಪ ಅಮ್ಮಂದಿರನ್ನ ಮನಸಲ್ಲೇ ಕೇಳಿ.. 'ಏಕೆ ಹೀಗಾಯ್ತೋ ನಾನು ಕಾಣೆನು ' ಮನಸಲ್ಲೇ ನೊಂದು ನನ್ನ ನಿತ್ಯದ ಹಾದಿ ಹಿಡಿವಾಗ.. ರಸ್ತೆ ಯಲ್ಲಿ ಕಾಣುವ ಬೈಕ್ ಗಳು, ಕಾರ್ ಗಳು..
ಅದರ ಮೇಲಿರುವ ತಮ್ಮ ತಮ್ಮ ಪ್ರಿಯತಮೆಯ .. ಗೆಳತಿಯ ಹೆಸರುಗಳು ಚಿತ್ತಾಕರ್ಷವಾಗಿ , ರಂಗು ರಂಗಾಗಿ ಬರೆಸಿಕೊಂಡು, ಮೆತ್ತಿಸಿಕೊಂಡಿರುವುದನ್ನ ನೋಡಿದರೆ ನನ್ನ ಮನಸಲ್ಲಿ ಏನೋ ಈರ್ಷ್ಯೆ... ವ್ಯಥೆ. ನಾನು ಎಲ್ಲರಂತೆ ಇದ್ದಿದ್ದರೆ.. ನನಗು ಒಬ್ಬಳು ಗೆಳತಿ, ಪ್ರಿಯತಮೆ, ಪತ್ನಿ ಎಲ್ಲ ಸಿಕ್ಕಿ, ಅವರ ಹೆಸರನ್ನ ಹೀಗೆ ಪ್ರೀತಿಯಿಂದ ಕಾರ್ , ಬೈಕ್ ಮೇಲೆ ಬರೆದು . " ಇವಳೇ ನನ್ನವಳು" ಅಂತ ಹೇಳ್ಕೊಬಹುದಿತ್ತಲ್ಲ ಎಂಬ ಆಶೆ ಮನೋವ್ಯಥೆ ಕಾಡುತ್ತೆ.
ನನ್ನ ವಿಧಿಬರೆಹಕ್ಕೆ ಶಪಿಸಿಕೊಂಡರು ಬದಲಾಗದ Gay ಸ್ಥಿತಿ.. ಎಲ್ಲ ಕಡೆ ನನ್ನಂತೆ Gay ಜೀವನ ನಡೆಸುತ್ತಾ ಇದ್ದಾರೆ ಎಂದು ನನಗೆ ನಾನೇ ಸಮಾಧಾನ ಪಟ್ಟು. ನನಗೂ ಒಬ್ಬ ನನಗಿಂತ ನನ್ನನ್ನ ಇಷ್ಟ ಪಡುವ ಗೆಳೆಯ (ಪ್ರಿಯತಮ, Partner, lifemate..) ಸಿಕ್ಕರೆ ನಾನು ಹೀಗೆ ಹೆಸರನ್ನ ಬೈಕ್. ಕಾರ್ ಮೇಲೆ ಕೆತ್ತಿಸಬಹುದಲ್ಲ ಎಂಬ ಹುಚ್ಚು ಕಲ್ಪನೆಯಲ್ಲಿ, ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲಿ ... ಅವನ ಹುಡುಕಾಟದಲ್ಲಿ ಕಳೆದು ಹೋದೆ.

ನನಗೂ ಕನಸಿದೆ...
ಅವನ ಎದೆಯಾಳದಲ್ಲಿ ನನ್ನದೊಂದು ಪುಟ್ಟ ಗೂಡು ಕಟ್ಟುವ ಆಸೆ..
ಅವನ ಬಿಸಿ ಉಸಿರಲ್ಲಿ ನನ್ನ ಉಸಿರ ಬೆರೆಸುವ ಆಸೆ..
ಅವನ ಮಡಿಲಲ್ಲಿ ಈ ಜಗತ್ತನ್ನೇ ಮರೆವ ಆಸೆ..
ಆಸೆ ಬರಿ ಆಸೆಗಳಾಗೆ ಉಳಿಯುತ್ತೇನೋ.. 
ಗೆಳೆಯನ  ಅನಿಸಿಕೆ ಹೀಗಿದೆ.
ಇತ್ತ ನಾರ್ಮಲ್ ಆಗಿ ಇರೊಕ್ಕಾಗಲ್ಲ.. ಇತ್ತ ಗೇ ಲೈಫ್ ನಲ್ಲಿ ಇರೋಣ ಅಂದ್ರೆ ಎಲ್ಲ ಬಾರಿ ವನ್ ಟೈಮ್ ಸೆಕ್ಸ್ ಮಾಡಿ ಸುಮ್ನಗ್ತಾರೆ... ಮತ್ತೆ ಕಾಂಟ್ಯಾಕ್ಟ್ ಮಾಡೋಲ್ಲ ಲಾಂಗ್ ಟರ್ಮ್ ಫ್ರೆಂಡ್ ಶಿಪ್ ಬಯಸೋದೇ ಇಲ್ಲ.. ಒಂದೊಂದು ಸಲ ಬೇಜಾರ್ಗೀಬಿಡುತೆ. ಹೃದಯದ ಯಾವುದೋ ಮೂಲೆಯಲ್ಲಿ ನನ್ನವ ಸಿಕ್ತಾನೆ ಅನ್ನೋ ಆಸೆ... ಆ ಆಸೆ ಎಲ್ಲಿ ಮರೀಚಿಕೆ ಆಗುತ್ತೋ ಏನೋ?
ನನಗಂತೂ ಹೇಳ್ಕೋಳೋ ಹಾಗಿಲ್ಲ ಇತ್ತ ಸುಮ್ನಿರೋಕು ಆಗೋಲ್ಲ... ಒಬ್ಬ ಒಳ್ಳೇ ಲೈಫ್ ಪಾರ್ಟ್ನರ್ ಯಾವಾಗ ಸಿಕ್ತನೋ ಅಂತ ಕಾಯುತಿದೀನಿ... ಆ ದೇವ್ರು ನನ್ನ ಹಣೆ ಯಲ್ಲಿ ಬರ್ದಿಲ್ಲ ಅನ್ಸುತ್ತೆ... ಯಾಕಂದ್ರೆ ಎಲ್ರಿಗೂ ವನ್ ನೈಟ್ ಅಷ್ಟೇ ಬೇಕಾಗಿರೋದು... ಅದುಕೋಸ್ಕರ ಮೀಟ್ ಮಾಡೋಕೆ ಮುಂಚೆ ಅದು ಇದು ಅಂತ ಪ್ರಾಮಿಸ್ ಮಾಡ್ತಾರೆ, ಆಮೇಲೆ ಎಲ್ಲ ಮರ್‍ತು ಹೋಗ್ತಾರೆ..... ಪ್ರಪಂಚ ಎಲ್ಲ ಇಷ್ಟ್ರಾಲ್ಲೇ ಇದೆಯಾ? ಫ್ರೆಂಡ್ ಶಿಪ್ ಗೆ / ರಿಲೇಶನ್ಶಿಪ್ ಗೆ ಬೆಲೆ ನೇ ಇಲ್ವಾ? ಅಂತ ಅನಿಸ್ತಿದೆ... ಎಲ್ರೂ ಮೇಲೂ ನಂಬಿಕೆನೇ ಹೊರಟು ಹೋಗ್ತಿದೆ ನನಗೆ.
(ಒಂದು ಬ್ಲಾಗ್ ನಲ್ಲಿ ಕಂಡಿದ್ದು )
The sweetness of friendship veers into the pain of betrayal. He speaks when you turn your back. He makes face when you look at him. He is classified as a mirror - great liar! He utters thoughtless words to satisfy his childish needs. He stabs at anyone's back in order to save his self from great humiliation. a pathetic being, in order to beat his needs...he's willing to sacrifice friendship and give up love without hesitation. He shows apathy to everyone. Show him importance, he'll take you for granted. Give him power, he'll over use it. Show him love, he won't mind. Give him respect, he don't deserve it. Give him trust, he'll break it!
Another friendship had been broken. "Forget not honesty; but let thine heart keep its trust."






9 comments:

  1. Nice Please Continue.............

    ReplyDelete
  2. barediruva post onde agiddaru manasige tattutte. Taleyalli uliyatte. Alochisuvante madatte.

    ReplyDelete
  3. Its very nice.. Whatever u have written is very true.. Even I have undergone this situation..

    ReplyDelete
  4. When we build a building, the foundation is laid with concrete..and there is soo much added in concrete like cement, stones..so on.
    and the same concrete is put as foundation and the taller the building the stronger the foundation is laid. and then allowed for weeks to get stronger and stiff.

    So love is like the same...its not easy to get it. but once you think you are getting it..we need to putin different things to make is strong and then finally lay it and wait for it to become stronger and stiff..and then start building..
    same wise, when you get someone and feel ..this is it.he is the one.
    Hold on your horses..give it time..let it go through all trials and tests..till then let it be a good friendship.
    once you realize after all trials and tests, thats the foundation is stronge, then build it.
    which means once the friendship goes through all trails and tests..but still exists..then propose your love and then build it on..
    in this course of time, you get to understand the other indivisual better and the vise versa.
    yeah course of time..time is something which cannot be predicted..one month, one year or even more..

    cheers
    Ridrob

    ReplyDelete

ಕುರುಡು ಪ್ರೀತಿಯಿಂದ..

ಕುರುಡು ಪ್ರೀತಿಯಿಂದ..   ಹೇಗೆ ಬರೆಯಲಿ ಈ ವಿಷಯವನ್ನು ಅಂತ ಅನಿಸುತ್ತಲೇ ಯಾಕೋ ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಅದು ನಾನು ಮಾಡಿದ ತಪ್ಪೋ, ಅವನು ಮಾಡಿದ ತಪ್ಪೋ ಅಥವಾ...