Sunday, July 31, 2011

ಮನಸಲ್ಲಿ ಚೂರು ಜಾಗ ಬೇಕಿದೆ



ಮಾನವ ಅಂದಮೇಲೆ ಒಂದು ಗಂಡು-ಹೆಣ್ಣು ಪರಸ್ಪರ ಆಕರ್ಷಣೆ, ಪ್ರೀತಿ, ಬಾಂಧವ್ಯ ಎಲ್ಲವೂ ಸಹಜ. ಪ್ರಕೃತಿಯ ನಿಯಮದಂತೆ ಆ ಇಬ್ಬರ ಮಿಲನದಿಂದ ಸಂತಾನ ಅಭಿವೃದ್ಧಿ ಮಾನವನ ವಂಶಾವಳಿ ಪೀಳಿಗೆಯ ಉದ್ದಾರ.
ಆದರೆ ಇಲ್ಲಿ ಪುರುಷ-ಪುರುಷ ಮಿಲನ ಸಹಜವೇ ಇಲ್ಲ ಅಸಹಜವೇ ಎನ್ನುವ ತೀವ್ರ ಗೊಂದಲ ಕಾಡುತ್ತಿವೆ.  ಸಹಜ ಕ್ರಿಯೆಯಂತೆ ಸಿಗದ ಈ ಪುರುಷ-ಪುರುಷ ಪ್ರೀತಿ (ಆಕರ್ಷಣೆ) ಸಿಕ್ಕಾಗ ಏನೋ ಸಂತೋಷ  ಮನಸ್ಸಿನ, ದೇಹದ ಮಿಲನ ಬಯಸಿ ಸುಖವನ್ನ ಅರಸಲು ತಡಕಾಡುತ್ತದೆ ಈ ಮನ. ಆದರೆ ಅದೇ ನಿಜವಾದ ಪ್ರೀತಿ ಸಿಗದೇ ಇದ್ದಾಗ ಅಲ್ಲಿರುವ ಆತಂಕ ದುಗುಡಕ್ಕೆ ಯಾವುದೇ ಗಂಡು-ಹೆಣ್ಣಿನ ವಿರಹ ಪ್ರೇಮಕ್ಕಿಂತ ಕಡಿಮೆ ಏನಿಲ್ಲ. ಇಲ್ಲೂ ಪ್ರೀತಿ ಪ್ರೇಮ ಸ್ನೇಹ ಆಕರ್ಷಣೆ ಎಲ್ಲವು ಇದೆ ಆದರೆ ಒಂದು ಜವಾಬ್ದಾರಿಯುತ ಸಂಬಂಧಗಳಿಲ್ಲ. "ಇಂದು ನೀ ನನ್ನವ ನಾಳೆ ನೀ ಯಾರೋ ..." ಎನ್ನುವ ಸ್ಥಿತಿಯಲ್ಲಿದ್ದೇವೆ. ಹೊಸತನ್ನು ಹುಡುಕುವ ಭರದಲ್ಲಿ ತಮ್ಮತನವನ್ನ ಕಳೆದುಕೊಳ್ಳುತ್ತಾ ಮುಂದಿನ ಜೀವನದ ಬಗ್ಗೆ ಚಿಂತಿಸದೆ, ಈಗಿನ ತಕ್ಷಣದ ಮಾನಸಿಕ, ದೈಹಿಕ ಆಸೆಗಳನ್ನ ಪೂರೈಸಿಕೊಳ್ಳುವುದರಲ್ಲಿ ನಿರತ..
ಆದರೆ ವಯಸ್ಸು ಆಕರ್ಷಣೆ ಎಲ್ಲವೂ ಕಡಿಮೆ ಆಗುತ್ತಾ ಬರುವಾಗ ಒಂಟಿತನ ಕಾಡದೆ ಇರುವುದಿಲ್ಲ. ಏನೇ ಇರಲಿ ಮಾನವ ಸಮಾಜ ಜೀವಿ ಜತೆಗಾರ ಬೇಕು ಉತ್ತಮ ಸಂಗಾತಿ , ಬಾಳ ಸಂಗಾತಿ ಬೇಕು.. ಸಿಗುವನೇ ಆ ಸಂಗಾತಿ ಎನ್ನುವ ಜೀವಿ? 
ಕಾಣದಾ ಕಡಲಿಗೆ ಹಂಬಲಿಸಿದೆ ಮನ.. 
ಕಾಣಬಲ್ಲೆನೆ ಒಂದು ದಿನ ?
ಸೇರಬಲ್ಲೆನೆ ಒಂದು ಕ್ಷಣ ?
ಕಾಣದ ಕಡಲು, ಮುಗಿಲ ಮಲ್ಲಿಗೆ, ನಿಲುಕದ ನಕ್ಷತ್ರ, ಮೃಗತೃಷ್ಣ, ಮರೀಚಿಕೆ , ಕಾಮನಬಿಲ್ಲು, ಆಕಾಶ ದೀಪ, ಬಿಸಿಲುಗುದುರೆ 
ಎಲ್ಲವು ನೀನಾಗಬೇಡ ಗೆಳೆಯ. ನನ್ನಂತೆ ನಿನಗೂ ಒಂದು ಮನಸಿದೆ..
"ಆ ಮನಸಲ್ಲಿ ಚೂರು ಜಾಗ ಬೇಕಿದೆ"
 

4 comments:

  1. veryy nise keep it up

    ReplyDelete
  2. ಎಲ್ಲರಂತಲ್ಲದಿಹ ನಮ್ಮ ಮನದೀ ತುಡಿತ ತಟ್ಟದೆಲ್ಲರ ಮನಸಿಗೆ,
    ಕೊಲ್ಲುವೇಕಾಂತವನು ಕಳೆಯಲೊಲವಿನ ಒಂದು ಕೈ ಸಾಕು ಈ ಕನಸಿಗೆ.
    ಎಲ್ಲೆಲ್ಲೊ ಅಲೆದು ಒಲವಿನ ಹನಿಗೆ ಬಾಯಾರಿ ಬೆಂಡಾದ ಈ ತನುವಿಗೆ,
    ಮೆಲ್ಲುಲಿಯ ಒಲವಿನಲಿ ಬೆಲದಿನ್ಗಳಂತಾಗಿ ಹಿತ ನೀಡುವಾ ಸೋಗೆಗೆ...

    ReplyDelete
  3. ಕೇಳೆ ನಾನು ನಿನ್ನ ಚಂದ್ರಲೋಕಕೊಯ್ಯೊ ಪ್ರೀತಿ
    ತಾಳಿಕೊಳ್ಳು ನನ್ನ ಅಳುವ ನಗುವ ಮರೆಯ ಪ್ರೀತಿ
    ಗೆಳೆಯ ನಿನ್ನ ನನ್ನ ಎದೆಯೊಳಿಟ್ಟುಕೊಳುವೆ ದಿನವು
    ತಳ್ಳಬೇಡ ಹೊರಗೆ ನನ್ನ ಜೀವವನ್ನೆ ಸೆಳೆದು

    ReplyDelete

ಕುರುಡು ಪ್ರೀತಿಯಿಂದ..

ಕುರುಡು ಪ್ರೀತಿಯಿಂದ..   ಹೇಗೆ ಬರೆಯಲಿ ಈ ವಿಷಯವನ್ನು ಅಂತ ಅನಿಸುತ್ತಲೇ ಯಾಕೋ ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಅದು ನಾನು ಮಾಡಿದ ತಪ್ಪೋ, ಅವನು ಮಾಡಿದ ತಪ್ಪೋ ಅಥವಾ...